ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಬಿಜೆಪಿಯ ವಿನುತಾ ಸಾರಕೂಟೇಲು ಮತ್ತು ದಮಯಂತಿ ಲಿಂಗಪ್ಪ ಗೌಡ ಅಡ್ಕಾರು ಗೆಲುವು
ಕನಕಮಜಲು ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದ
ವಿನುತಾ ಸಾರಕೂಟೇಲು (436 ಮತ ) ಮತ್ತು ದಮಯಂತಿ ಲಿಂಗಪ್ಪ ಗೌಡ ಅಡ್ಕಾರು (419 ಮತ)
ಮತ ಪಡೆದು ವಿಜಯ ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಗಳಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳಾದ ತಿರುಮಲೇಶ್ವರಿ ಎ. ಎಲ್ (200 ಮತ) ಮತ್ತು ಜಯಂತಿ ಕೆ (173 ಮತ ) ಪಡೆದು ಸೋಲನುಭವಿಸಿದ್ದಾರೆ.