ಐವರ್ನಾಡು ಸಹಕಾರಿ ಸಂಘದ ಚುನಾವಣೆ

0

ಹಿಂದುಳಿದ ವರ್ಗ ಎ ,ಹಿಂದುಳಿದ ವರ್ಗ ಬಿ, ಪರಿಶಿಷ್ಟ ಜಾತಿ,ಪ.ಪಂಗಡದಲ್ಲಿ ಮನ್ಮಥರ ತಂಡ ವಿಜಯಿ

ಐವರ್ನಾಡು ಸಹಕಾರಿ ಸಂಘದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ , ಹಿಂದುಳಿದ ವರ್ಗ ಬಿ, ಪರಿಶಿಷ್ಟ ಜಾತಿ,ಪರಿಶಿಷ್ಡ ಪಂಗಡ ಸ್ಥಾನದಲ್ಲಿ ಎಸ್ .ಎನ್.ಮನ್ಮಥ ನೇತ್ವದ ತಂಡದ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.
ಹಿಂದುಳಿದ ವರ್ಗ ಬಿಯಲ್ಲಿ ರವಿನಾಥ ಎಂ.ಎಸ್.376 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಬಿಜೆಪಿಯ ಪ್ರದೀಪ್ ಪಿ.ಆರ್.316, ಕಾಂಗ್ರೆಸ್ ನ ಕರುಣಾಕರ ಗೌಡ ಮಡ್ತಿಲ 232 ಮತಗಳನ್ನು ಪಡೆದು ಪರಾಭವಗೊಂಡರು.

ಪರಿಶಿಷ್ಡ ಜಾತಿಯಲ್ಲಿ ಮನ್ಮಥರ ತಂಡದ ಚಂದ್ರಶೇಖರ 480 ಮತಗಳನ್ನು ಪಡೆದು ವಿಜಯಿಯಾದರು.
ಬಿಜೆಪಿಯ ಮಾಯಿಲಪ್ಪ ಕೆ 345, ಕಾಂಗ್ರೆಸ್ ನ ಚಂದ್ರಕುಮಸರೇಶನ್ 171 ಮತ ಪಡೆದು ಪರಾಭವಗೊಂಡರು.
ಪರಿಶಿಷ್ಟ ಪಂಗಡದ ಮನ್ಮಥರ ನೇತೃತ್ವದ ಪುರಂದರ ಎಸ್.,441, ಬಿಜೆಪಿಯ ಪ್ರವೀಣ್ ಕುಮಾರ್ 278, ಕಾಂಗ್ರೆಸ್ ನ ಕೇಶವ ನಾಯ್ಕ 208 ಮತಗಳನ್ನು ಪಡೆದು ಪರಾಭವಗೊಂಡರು.