ಪೆರಾಜೆ ರಾಜ್ಯ ಹೆದ್ದಾರಿಯಲ್ಲಿ ನವೀ’ಸ್ ಕೆಫೆ ಡಿ.23 ರಂದು ಶುಭಾರಂಭಗೊಂಡಿತು.
ಪ್ರಗತಿಪರ ಕೃಷಿಕರಾದ ಪ್ರಭಾಕರ ರೈ ಪೆರಾಜೆ ಯವರು ದೀಪ ಪ್ರಜ್ವಲಿಸಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವಅಡ್ತಲೆ,ಅರಂತೋಡು ತೊಡಿಕಾನಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ,ನಿವೃತ್ತ ಶಿಕ್ಷಕ ಲಿಂಗಪ್ಪ ಗೌಡ,ಪೆಟ್ರೋಲ್ ಬಂಕ್ ಮಾಲಕ ರಾಜ ಹೊದ್ದೆಟ್ಟಿ,ನಿರ್ದೇಶಕ ದಯಾನಂದ ಕುರುಂಜಿ ಅತಿಥಿಗಳಾಗಿದ್ದರು. ಹಿರಿಯರಾದ ರಾಮ ಪಾಟಾಳಿ ಮತ್ತು ಶ್ರೀಮತಿ ಗಿರಿಜಾ ದಂಪತಿ ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು. ಪಾಲುದಾರರಾದ ನವೀನ್ ಕುಮಾರ್ ಪೆರಾಜೆ ಸ್ವಾಗತಿಸಿದರು. ಸುರೇಶ್ ಆಲೆಟ್ಟಿ ವಂದಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.