ಸಚಿನ್ ಕ್ರಿಕೆಟರ್ಸ್ ಹರಿಹರಕ್ಕೆ ಬಹುಮಾನ
ನಿಸರ್ಗ ಯುವಕ ಮಂಡಲ ರಿ ಐನೆಕಿದು, ನಿಸರ್ಗ ಬೆಳ್ಳಿಹಬ್ಬ ಸಂಭ್ರಮ ಸಮಿತಿ ಇದರ ಆಶ್ರಯದಲ್ಲಿ ನಿಸರ್ಗ ಬೆಳ್ಳಿಹಬ್ಬ ಸಂಭ್ರಮ 2024 ರ ಪ್ರಯುಕ್ತ ದ.ಕ ಜಿ ಪಂ ವ್ಯಾಪ್ತಿಯ 7ಜನರ 30 ಗಜಗಳ ಹಿಂದೂ ಬಾಂಧವರ ಅಂಡರ್ಆರ್ಮ್ ಕ್ರಿಕೆಟ್ ಪಂದ್ಯಾಟ ಡಿ.22ರಂದು ಐನೆಕಿದು ಮೈದಾನದಲ್ಲಿ ನಡೆಯಿತು.
ಸಚಿನ್ ಕ್ರಿಕೆಟರ್ಸ್ ಹರಿಹರ ಎ ಪ್ರಥಮ ಸ್ಥಾನ ಪಡೆಯಿತು. ಸಚಿನ್ ಕ್ರಿಕೆಟರ್ಸ್ ಹರಿಹರ ಬಿ ತಂಡ ದ್ವಿತೀಯ ಬಹುಮಾನ ಪಡೆಯಿತು. ಲಕ್ಕಿ ಬಾಯ್ಸ್ ಸುಳ್ಯ ತೃತೀಯ ಬಹುಮಾನ ಪಡೆಯಿತು. ಸಚಿನ್ ಕ್ರಿಕೆಟರ್ಸ್ ತಂಡ ಚತುರ್ಥ ಬಹುಮಾನ ಪಡೆಯಿತು.
ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಜಯಾನಂದ ಹೊಸಮನೆ ನೆರವೇರಿಸಿದರು.
ಅತಿಥಿಗಳಾಗಿ ನಿಸರ್ಗ ಯುವಕ ಮಂಡಲದ ಅದ್ಯಕ್ಷರಾದ ಕಾರ್ತಿಕ್ ಕೂಜುಗೋಡು,ಬೆಳ್ಳಿಹಬ್ಬದ ಕ್ರೀಡಾ ಪ್ರಮುಖ್ರಾದ ಪುನಿತ್ ಪೈಲಾಜೆ, ರಕ್ಷನ್ ಅಂಙಣ, ಗೌರವದ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಭವಾನಿಶಂಕರ ಪೈಲಾಜೆ, ಬೆಳ್ಳಿ ಹಬ್ಬ ಸಮಿತಿ ಉಪಾಧ್ಯಕ್ಷರಾದ ನವೀನ್ ಕೆದಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಿರೀಶ್ ಪೈಲಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪದ್ಮರಾಜ್ ಗುಂಡಡ್ಕ ಧನ್ಯವಾದಗೈದರು.