ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಹಿಂದುಳಿದ ವರ್ಗ ಬಿ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಮಹಾಬಲ ಕಟ್ಟಕ್ಕೋಡಿ ೩೨೭ ಮತಗಳನ್ನು ಪಡೆದು ವಿಜಯಿಯಾದರು.
ಮರ್ಕಂಜ ಸಹಕಾರ ಬಳಗದ ಅಭ್ಯಥಿ ಯಶವಂತ ೧೬೭ ಮತಗಳು, ಸ್ವತಂತ್ರ ಅಭ್ಯಥಿ ಬಾಲಕೃಷ್ಣ ಗೌಡ ೧೫೮ ಮತಗಳನ್ನು ಪಡೆದು ಪರಾಭವಗೊಂಡರು.
ಮಹಿಳಾ ಮೀಸಲು ೨ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಹಕಾರ ಭಾರತಿಯ ಅಭ್ಯರ್ಥಿ ಅಕ್ಷತಾ ಕೆ.ಸಿ. ೩೯೫ ಮತಗಳು ಮತ್ತು ಲತಾಶ್ರೀ ೩೮೨ ಮತಗಳನ್ನು ಪಡೆದು ವಿಜಯಿಯಾದರು. ಮರ್ಕಂಜ ಸಹಕಾರ ಬಳಗದ ಅಭ್ಯರ್ಥಿ ಜಯಶ್ರೀ ೨೦೬ ಮತಗಳು ಮತ್ತು ಶೀಲಾವತಿ ೧೩೭ ಮತಗಳನ್ನು ಪಡೆದು ಪರಾಭವಗೊಂಡರು.