ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ಬಿಜೆಪಿ ಜಯಭೇರಿ

0

ಸಾಮಾನ್ಯ ಸ್ಥಾನದಲ್ಲಿ ಬಿಜೆಪಿ ಬೆಂಬಲಿತ 5 ಸ್ಥಾನ ಗೆಲುವು, ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ೬ ಸ್ಥಾನಕ್ಕೆ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಚೆನ್ನಕೇಶವ ದೋಳ ೪೧೦ ಮತಗಳು, ದಯಾನಂದ ಪುರ ೩೨೮ ಮತಗಳು , ನವೀನ ದೊಡ್ಡಿಹಿತ್ಲು ೩೧೬ ಮತಗಳು, ಮೋನಪ್ಪ ಪೂಜಾರಿ ಹೈದಂಗೂರು ೩೨೨ ಮತಗಳು, ವೆಂಕಟ್ರಮಣ ಗೌಡ ಕೆ ೩೨೧ ಮತಗಳನ್ನು ಪಡೆದು ವಿಜಯಿಗಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ನಿವೃತ್ತ ಶಿಕ್ಷಕ ಅಚ್ಚುತ ತೇರ್ಥಮಜಲು ೩೬೪ ಮತಗಳನ್ನು ಪಡೆದು ಗೆಲುವ ಸಾಧಿಸಿದ್ದಾರೆ.

ಮರ್ಕಂಜ ಸಹಕಾರ ಬಳಗದ ಅಭ್ಯರ್ಥಿಗಳಾದ ಕೊರಗಪ್ಪ ಗೌಡ ೧೬೦ ಮತಗಳು, ಜಯರಾಮ ಡಿ. ೧೨೧ ಮತಗಳು, ಪುಷ್ಪರಾಜ ರೈ ೨೬೧ ಮತಗಳು, ರಮೇಶ ಬಿ. ೧೨೮ ಮತಗಳು, ವಿಶ್ವನಾಥ ಜಿ. ೧೨೩ ಮತಗಳು, ವೆಂಕಪ್ಪ ಕೆ. ೧೧೦ ಮತಗ, ಸಹಕಾರ ಭಾರತಿಯ ಪ್ರಶಾಂತ ರೈ ೩೦೬ ಮತಗಳು, ಸ್ವತಂತ್ರ ಅಭ್ಯಥಿ ಕೃಷ್ಣರಾಜ್ ಶೆಟ್ಟಿ ಬಲ್ಬಾಡುಪೇಟೆ ೨೩೬ ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣಾಧಿಕಾರಿ ಬಿ. ನಾಗೇಂದ್ರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.