ಸುಳ್ಯ ಅನ್ಸಾರಿಯಾ ಗಲ್ಫ್ ಅಡಿಟೋರಿಯಂ ನಲ್ಲಿ ಶೈಕ್ಷಣಿಕ ಮಾಹಿತಿ ಕಾರ್ಯಗಾರ ಮತ್ತು ಸ್ಕಾಲರ್ಶಿಪ್ ಘೋಷಣೆ

0

ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಬೆಳೆಸುವುದೇ ಎನ್ಲೈಟ್ ಗುರಿ

ಅನ್ಸಾರ್ ಮತ್ತು ಎನ್ಲೈಟ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆ

ಎನ್ಲೈಟ್ ಎಜುಕೇಶನಲ್ ಸರ್ವಿಸಸ್ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್
ಸಹಭಾಗಿತ್ವದಲ್ಲಿ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ
SSLC ಮತ್ತು PUC ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಮಾಹಿತಿ ಕಾರ್ಯಗಾರ
ಮತ್ತು ಸ್ಕಾಲರ್ಶಿಪ್ ಘೋಷಣಾ ಕಾರ್ಯಕ್ರಮವು ಡಿ.25 ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕಟ್ಟೆಕಾರ್ಸ್ ವಹಿಸಿದರು.

ಸೈಫುದ್ದೀನ್ ಪಟೇಲ್ ನಿರ್ದೇಶಕರು ಪಟೇಲ್ ಚಾರಿಟೇಬಲ್ ಟ್ರಸ್ಟ್ ರವರು ಪ್ರಸ್ತುತ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಗಳು ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅನ್ಸಾರಿಯಾ ದಹವ ಕಾಲೇಜು ಮದರಿಸ್ ಕಬೀರ್ ಹಿಮಮಿ ಸಖಾಫಿ ದುವಾಆಶೀರ್ವಚನ ಮಾಡಿದರು.

MEIF ಉಪಾಧ್ಯಕ್ಷರಾದ ಹಾಜಿ ಕೆ.ಎಂ ಮುಸ್ತಫಾ ವಿದ್ಯಾರ್ಥಿಗಳೊಂದಿಗೆ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.

ಈ ಮುಂಬರುವ SSLC ಮತ್ತು PUC ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನ್ನು NES ಗೋಸ್ಕರ ಆದಂ ಹಾಜಿ ಕಮ್ಮಡಿ ಕೋಶಾಧಿಕಾರಿ ಅನ್ಸಾರಿಯ ಎಜುಕೇಶನಲ್ ಸೆಂಟರ್ ಮತ್ತು ಹಮೀದ್ ಕುತ್ತಮಟ್ಟೆ ಅಧ್ಯಕ್ಷರು ಗ್ಯಾರಂಟಿ ಪ್ರತಿಷ್ಠಾನ ಸುಳ್ಯ ಅವರು ಸದರಿ ಯೋಜನೆಯ ಕರಪತ್ರವನ್ನು ಅನಾವರಣಗೊಳಿಸಿದರು.

ಖ್ಯಾತ ಶೈಕ್ಷಣಿಕ ತರಬೇತುದಾರರಾದ ಅಬ್ದುಲ್ ರಜಾಕ್ ಮಾಸ್ಟರ್ ಅನಂತಾಡಿಯವರು ಕ್ರಿಯಾಶೀಲ ರೀತಿಯಲ್ಲಿ ವಿದ್ಯಾರ್ಥಿಗಳ ಮನ ಸೆಳೆಯುವಂತೆ ಶಿಕ್ಷಣದ ಕುರಿತು ಪ್ರಭಾವಿ ತರಬೇತಿಯ ನೀಡುವುದರೊಂದಿಗೆ ಪರೀಕ್ಷೆಗೆ ಪೂರ್ವ ಸಿದ್ಧತೆ ಮತ್ತು ಇತರ ಕಲಿಕಾ ಸಲಹಾ ಸೂಚನೆಗಳನ್ನು ನೀಡಿದರು.
ಪ್ರಸ್ತುತ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.

ಸಭೆಯಲ್ಲಿ ಹಾಜಿ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷರು ಅನ್ಸಾರಿಯ ಎಜುಕೇಶನ್ ಸೆಂಟರ್, ಹಾಜಿ ಹಮೀದ್ SM, ಹಾಜಿ ಮೊಯ್ದೀನ್ ಫ್ಯಾನ್ಸಿ, ಹಾಜಿ ಅಬ್ದುಲ್ ಖಾದರ್ ಪಾರೆ, ಹಾಜಿ ಅಬ್ದುಲ್ ಶುಕೂರ್, ಅಬೂಬಕರ್ SP, ಇಬ್ರಾಹಿಂ KB, ಇಕ್ಬಾಲ್ ಕನಕಮಜಲು, ಫೈಝಲ್ ಕಟ್ಟೆಕ್ಕಾರ್, ಸಂಶುದ್ದೀನ್ ಕೆಬಿ, ಶಹೀದ್ ಪಾರೆ, ಅಶ್ರಫ್ ಗುಂಡಿ, ಅಕ್ಬರ್ ಕರಾವಳಿ, ರಶೀದ್ ಜಟ್ಟಿಪಳ್ಳ, ಬಷೀರ್ ಬೆಳ್ಳಾರೆ, ಇಲ್ಯಾಸ್ ಪ್ರಿನ್ಸಿಪಾಲ್ ಗ್ರೀನ್ ವ್ಯೂ ಶಾಲೆ, ಇಸ್ಹಾಕ್ ಉಪನ್ಯಾಸಕರು PU ಕಾಲೇಜ್ ಐವರ್ನಾಡು, ಮೊಗರ್ಪಣೆ ಶೀ ಕ್ಯಾಂಪಸ್’ನ ಉಪನ್ಯಾಸಕಿಯರಾದ ಖದೀಜ , ರಹನ, ಸಫನ, nLight ಕಾರ್ಯಕಾರಿ ಸಮೀತಿ ಸದಸ್ಯರಾದ ಆಶಿಕ್ ಸುಳ್ಯ, ಮಶ್ಹೂದ್ ಮಚ್ಚು, ಅಬ್ದುಲ್ ಮುಜೀಬ್ ಕೆ.ಬಿ, ಆಸೀಫ್ ಪನ್ನೆ ಉಪಸ್ಥಿತರಿದ್ದರು, ಅಲ್ಲದೆ ಸಭೆಯನ್ನುದೇಶಿಸಿ ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತವನ್ನು ಕಮಾಲ್ ಮಾಂಬ್ಲಿ ನೆರವೇರಿಸಿದರು. ಅನ್ಸಾರ್ ಪ್ರ.ಕಾರ್ಯದರ್ಶಿ ಹನೀಫ್ ಬಿಎಂ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮ ನಿಸಾರ್ ಶೈನ್ ನಿರೂಪಿಸಿದರು.