ಐವರ್ನಾಡು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ,ಉತ್ಸವ ಮೇಳ ಮುಂದೂಡಿಕೆ
ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇಂದು ಸರಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದ್ದು ಮತ್ತು ಶೋಕಾಚರಣೆ ಪ್ರಯುಕ್ತ ಐವರ್ನಾಡಿನಲ್ಲಿ ಇಂದು ನಡೆಯಬೇಕಾಗಿದ್ದ ಸಂಜೀವಿನಿ ಒಕ್ಕೂಟದ ಕಾರ್ಯಕ್ರಮ ಮುಂದೂಡಲಾಗಿದೆ.
ಇಂದು ಐವರ್ನಾಡು ಸಂಜೀವಿನಿ ಕಟ್ಟಡದ ಮುಂಭಾಗದಲ್ಲಿ ಸಂಜೀವಿನಿ ಒಕ್ಕೂಟದ 2024 -25 ನೇ ಸಾಲಿನ ಮಹಾಸಭೆ,ವಾರ್ಷಿಕೋತ್ಸವ ,ಸಂಜೀವಿನಿ ಉತ್ಸವ ಮೇಳ ನಡೆಸಲು ನಿರ್ಧರಿಸಲಾಗಿತ್ತು ಆದರೆ ಅದನ್ನು ಮುಂದೂಡಲಾಗಿದೆ ಎಲ್ಲರೂ ಸಹಕರಿಸಬೇಕೆಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.