ಕಟ್ಟಕೋಡಿ: ನಾಗಬ್ರಹ್ಮ, ರಕ್ತೇಶ್ವರಿ ಹಾಗೂ ಸಹ ಪರಿವಾರ ದೈವಗಳ ಪ್ರತಿಷ್ಠೆ

0

ಮರ್ಕಂಜ ಗ್ರಾಮದ ಕಟ್ಟಕೋಡಿ ಪರಿಸರದ ಸ್ಥಳ ದೈವ-ದೇವರುಗಳಾದ ವನದುರ್ಗೆ, ನಾಗ, ನಾಗಬ್ರಹ್ಮ, ರಕ್ತೇಶ್ವರಿ, ಪಂಜುರ್ಲಿ ಸಹ ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಕಾರ್ಯಕ್ರಮವು ಡಿ.25ರಂದು ನಡೆಯಿತು.

ತಂತ್ರಿಗಳಾದ ಪ್ರಸಾದ್ ಐತಾಳರವರ ನೇತೃತ್ವದಲ್ಲಿ ಡಿ.21ರಿಂದ 25ವರಗೆ ವಿವಿಧ ವೈದಿಕ ಕಾರ್ಯಕ್ರಮವು ಗಣಪಯ್ಯ ಗೌಡ ಕೋಡಿಯವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕುಟುಂಬಸ್ಥರು, ಊರಿನವರು, ನೆಂಟರಿಷ್ಟರು, ಬಂಧುಮಿತ್ರರು ಆಗಮಿಸಿ ದೈವ-ದೇವರುಗಳ ಪ್ರಸಾದ ಸ್ವೀಕರಿಸಿದರು.