ಪೆರುವಾಜೆ ಗ್ರಾಮದ ಮುರ್ಕೆತ್ತಿ ವಾರ್ಡ್ ನಲ್ಲಿ ಬೊಟ್ಟತ್ತಾರು ಎಂಬಲ್ಲಿ ಸುಮಾರು 17 ಮಂದಿ ಪರಿಶಿಷ್ಟ ಜಾತಿ ಕುಟುಂಬಗಳು 1998 ರಲ್ಲಿ ಸಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಇಲ್ಲಿಯವರೆಗೂ ಇದರ ಪರಿಶೀಲನೆಯನ್ನು ಕಂದಾಯ ಇಲಾಖೆ ನಡೆಸಿಲ್ಲ.
ಈ ಹಿಂದೆ 2021 ರಲ್ಲಿ ಇದರ ಬಗ್ಗೆ ಮನವಿ ಮಾಡಿದರು ಪ್ರಯೋಜನ ಆಗಿಲ್ಲ, ಇದೀಗ ಮತ್ತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ. ಇದೀಗ ಮತ್ತೆ ಮನವಿ ಮಾಡಿದ್ದು 15 ದಿನದ ಕಾಲಾವಕಾಶ ಕಂದಾಯ ಇಲಾಖೆಗೆ ನೀಡಲಿದ್ದೇವೆ. ಪರಿಶಿಷ್ಟ ಜಾತಿ ಕುಟುಂಬಗಳ ಬೇಡಿಕೆ ಈಡೇರದೇ ಇದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಸಚಿನ್ ತಿಳಿಸಿದ್ದಾರೆ.