ಜಿಲ್ಲಾ ಮಟ್ಟದ ವನ್ಯ ಚಿತ್ತಾರ ಚಿತ್ರಕಲೆ ಸ್ಪರ್ಧೆಯಲ್ಲಿ ಅವರಿಗೆ ನಿಹಾಲ್ ಕುಂಬಳಚೇರಿ ಗೆ ತೃತೀಯ ಬಹುಮಾನ

0

ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ಇವರು ಇತ್ತೀಚಿಗೆ ಮಕ್ಕಳಿಗಾಗಿ ಆಯೋಜಿಸಿದ ಜಿಲ್ಲಾಮಟ್ಟದ ವನ್ಯ ಚಿತ್ತಾರ ಚಿತ್ರಕಲಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ.
ಡಿಸೆಂಬರ್ 21ರಂದು ಪುತ್ತೂರಿನ ಅರಣ್ಯ ಇಲಾಖೆಯ ಸಮಾರಂಭದಲ್ಲಿ ಇಲಾಖೆಯ ಅಧಿಕಾರಿಗಳಿಂದ ಇವರು ಬಹುಮಾನವನ್ನು ಪಡೆದುಕೊಂಡರು.

ಚಿತ್ರಕಲೆಯಲ್ಲಿ ಅಪರಿಮಿತ ಆಸಕ್ತಿಯನ್ನು ಹೊಂದಿರುವ ಇವರು ಕೆಲವು ವರ್ಷಗಳಿಂದ ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಇವರು ಅನಿಲ್ ಕುಂಬಳಚೇರಿ ಹಾಗೂ ಲತಿಕಾ ಇವರ ಪುತ್ರ.