ಯೇನೆಕಲ್ಲು ಗ್ರಾಮದ ಮಾದನಮನೆ ದಿ.ರಾಘವ ಗೌಡರ ಧರ್ಮಪತ್ನಿ ಚಂದ್ರಮ್ಮ ರವರು ಅಲ್ಪಕಾಲದ ಅಸೌಖ್ಯದಿಂದ ಡಿ.28 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರಿಗೆ 84 ವರ್ಷ ವಯಸ್ಸಾಗಿತ್ತು.
ನಾಟಿವೈದ್ಯೆಯಾಗಿ, ಸುಲಭ ಹೆರಿಗೆ ಮಾಡಿಸುವುದು, ಬಾಣಂತಿಯರ ಆರೈಕೆ ಮಾಡುವುದರಲ್ಲಿ ಪರಿಣತರಾಗಿದ್ದ ಮೃತರು ಪುತ್ರ ಸುಂದರ ಗೌಡ ಮಾದನಮನೆ, ಪುತ್ರಿಯರಾದ ರತ್ನಾವತಿ ಪದ್ಮನಾಭ ಮುಚ್ಚಾರ, ಜಯಂತಿ ದೇವಪ್ಪ ಗೌಡ ಸೋಂಪಾಡಿ ಸವಣೂರು, ರೂಪಾವತಿ ಸೀತಾರಾಮ ಮಣಿಯಾನ ಮನೆ ಪೈಕ, ಪುಷ್ಪಾವತಿ ಮಹಾಬಲ ಗೌಡ ಕಮಿಲ, ಸೊಸೆ ಭವಾನಿ ಹಾಗೂ ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.