ಜೋಡುಪಾಲ: ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ

0

ಕ್ಷಣ ಮಾತ್ರದಲ್ಲಿ ವ್ಯಾಪಿಸಿದ ಬೆಂಕಿ,ಚಾಲಕ ಅಪಾಯದಿಂದ ಪಾರು

ಚಲಿಸುತಿದ್ದ ಈಚರ್ ಲಾರಿಯೊಂದು ಹೊತ್ತಿ ಉರಿದ ಘಟನೆ  ಜೋಡುಪಾಲದಲ್ಲಿ ಡಿ. 29 ತಡ ರಾತ್ರಿ ನಡೆದಿದೆ.

ಹೆಚ್ ಡಿ ಕೋಟೆಯಿಂದ ಭತ್ತದ ಲೋಡ್ ತುಂಬಿಸಿಕೊಂಡು ಉಡುಪಿ ಕಡೆಗೆ ಹೋಗುತ್ತಿದ್ದ ವೇಳೆ ಏಕಾ ಏಕಿ ಲಾರಿಗೆ ಬೆಂಕಿ ಕಾಣಿಸಿ ಕೊಂಡಿದೆ ಎನ್ನಲಾಗಿದೆ.

ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ.

ಈ ವೇಳೆ ಕ್ಷಣ ಮಾತ್ರದಲ್ಲಿ ಬೆಂಕಿ ವ್ಯಾಪಿಸಿದ್ದು ನೋಡು ನೋಡುತಿದ್ದಂತೆ ಲಾರಿ ಸುಟ್ಟು ಕರಗಲಾಗಿದೆ. ಘಟನೆಯಿಂದ ಕೆಲವು ಗಂಟೆಗಳ ಕಾಲ ಹೆದ್ದಾರಿಯಲ್ಲಿ  ಸಂಚಾರ ಅಸ್ತವ್ಯಸ್ತಗೊಂಡಿತ್ತು.