ನೋಡಿದವರು ಮಾಹಿತಿ ನೀಡುವಂತೆ ಮನೆಯವರ ಕೋರಿಕೆ
ವಿಟ್ಲದಿಂದ ಕಾಣೆಯಾಗಿರುವ ವ್ಯಕ್ತಿಯೊಬ್ಬರು ಸುಳ್ಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದೆ.
ಬಂಟ್ವಾಳ ತಾಲೂಕಿನ ವಿಟ್ಲದ ಪಳಿಕೆ ಅನ್ನಮೂಲೆ ನಿವಾಸಿ ಸುಂದರ ನಾಯ್ಕ (೫೩)ವರ್ಷ ಎಂಬವರು ಅಕ್ಟೋಬರ್ ೧ ರಂದು ದಸರಾ ಹಬ್ಬದಲ್ಲಿ ಹುಲಿವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದರು.ಆ ದಿನ ಸಂಜೆ ನೆರೆಹೊರೆಯವರು ನೋಡಿದ್ದರು. ನಂತರ ಮನೆಗೆ ಬಂದಿರುವುದಿಲ್ಲ.
ವೇಷ ಹಾಕಿದ ಕಾರಣ ದಸರಾ ಮುಗಿದ ನಂತರ ಮನೆಗೆ ಬರಬಹುದು ಎಂದು ಮನೆಯವರು ತಿಳಿದಿದ್ದರು. ಬಳಿಕ ಮನೆಗೆ ಬಾರದೆ ಕಾಣೆಯಾಗಿದ್ದರು. ಅವರ ಪುತ್ರಿ ದಿನಾಂಕ ೧೪-೧೦-೨೦೨೪ರಂದು ವಿಟ್ಲ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ನಂತರ ಕೆಲ ದಿನಗಳ ಹಿಂದೆ ಗುಂಡ್ಯ_ ಸುಬ್ರಹ್ಮಣ್ಯದ ಆಸುಪಾಸಿನಲ್ಲಿ ಇದ್ದಾರೆ ಎನ್ನುವ ಮಾಹಿತಿ ಮೇರೆಗೆ ಮನೆಯವರು ಹೋಗಿ ವಿಚಾರಿಸಿದಾಗ ಆಟೋ ಚಾಲಕರು ಹಾಗೂ ಕೆಲಸ ಕಾರ್ಮಿಕರು ನೋಡಿರುವುದು ಖಚಿತ ಪಡಿಸಿದ್ದರು. ಆದರೆ ಮನೆಯವರು ಬಂದು ಹುಡುಕಾಡಿದಾಗ ಪತ್ತೆಯಾಗಿರಲಿಲ್ಲ. ಬಳಿಕ ಇತ್ತೀಚೆಗೆ ಸುಳ್ಯ ಸುದ್ದಿ ಬಿಡುಗಡೆಯಲ್ಲಿ ವರದಿ ಪ್ರಕಟಗೊಂಡ ನಂತರ ಕೆಲವರು ದುಗಲಡ್ಕದಲ್ಲಿ ನೋಡಿದ್ದಾರೆ ಎಂದು ತಿಳಿಸಿದ್ದರು. ನಂತರ ನಾರ್ಕೊಡು _ ದೊಡ್ಡತೋಟ ಆ ಬದಿಯಲ್ಲಿ ಇದ್ದರೆನ್ನುವ ಮಾಹಿತಿ ದೊರೆತಿದ್ದರೂ ಪತ್ತೆಯಾಗಿರಲಿಲ್ಲ. ಇವರು ಸುಳ್ಯ ತಾಲೂಕಿನಲ್ಲಿ ಇರುವ ಮಾಹಿತಿ ಸಿಕ್ಕಿದ ಕೂಡಲೇ ಈ ನಂಬರ್ ಗೆ ಕರೆ ಮಾಡಿ ತಿಳಿಸುವಂತೆ ಮನೆಯವರು ತಿಳಿಸಿದ್ದಾರೆ.
9731327814
9901798655