ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲೀಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ಸಂಪಾಜೆ ದಫ್ ಸ್ಪರ್ಧೆ ಜ.5ರಂದು ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇರಡ್ಕ ಜಮಾಅತ್‌ನ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್’ ದಫ್ ಕಲೆ ಈಗ ಗ್ರಾಮೀಣ ಭಾಗದಲ್ಲಿ ಜನಪ್ರಿಯವಾಗುತ್ತಿದ್ದು ಹೆಚ್ಚು ಮಂದಿ ಯುವಕರು ದಫ್ ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಹಾಗೂ ತಾಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಪೇರಡ್ಕ ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್‌ನ
ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಮಾತನಾಡಿ ‘ ದಫ್ ಕಲೆಯನ್ನು ಪ್ರೋತ್ಸಾಹಿಸಲು ಮತ್ತು ನಮ್ಮಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಫ್ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಈಗಾಗಲೇ 14 ತಂಡಗಳು ಹೆಸರು ನೋಂದಾಯಿಸಿಕೊಂಡಿದೆ. ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸ್ಥಳೀಯ 6 ತಂಡಗಳು ಹೆಸರು ನೋಂದಾಯಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಸಂಜೆ 4 ಗಂಟೆಗೆ ಗೂನಡ್ಕ ಪೇಟೆಯಲ್ಲಿ ಆಕರ್ಷಕ ದಫ್ ತಂಡಗಳ ಮೆರವಣಿಗೆ ನಡೆಯಲಿದೆ.ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಇರಲಿದೆ ಎಂದು ಹೇಳಿದರು. ಸಂಜೆ 6 ಗಂಟೆಯ ಬಳಿಕ ತಾಲೂಕು ಮಟ್ಟದ ಸ್ಪರ್ಧೆ ಹಾಗೂ 8 ಗಂಟೆಯ ಬಳಿಕ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.9999 ಮತ್ತು ಫಲಕ, ದ್ವಿತೀಯ 7777
ಮತ್ತು ಫಲಕ, ತೃತೀಯ ರೂ 5555 ಮತ್ತು ಫಲಕ ನೀಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ
ಪ್ರಥಮ ಬಹುಮಾನ ರೂ.
25000 ಮತ್ತು ಫಲಕ, ದ್ವಿತೀಯ ಬಹುಮಾನ
ರೂ.15000 ಮತ್ತು ಫಲಕ, ತೃತೀಯ ಬಹುಮಾನ
ರೂ.10,000 ಮತ್ತು ಫಲಕ
ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಫ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ನಾಮ ನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೊ, ಖಲಂದರ್ ಎಲಿಮಲೆ, ಉಮ್ಮರ್ ತಾಜ್ ಉಪಸ್ಥಿತರಿದ್ದರು.