ಪೇರೋಡ್ ಮುಹಮ್ಮದ್ ಅಝ್ಹರಿ ಉಸ್ತಾದ್ ಹಾಗೂ ಝುಬೈರ್ ಮಾಸ್ಟರ್ ತೋಟಿಕ್ಕಲ್ ಆಗಮನ
ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸ ಸಮಿತಿ ಆಶ್ರಯದಲ್ಲಿ ದ. 30-31 : ಜಯನಗರ 8ನೇ ವಾರ್ಷಿಕ ಅಜ್ಮೀರ್ ಮೌಲೀದ್ ಕಾರ್ಯಕ್ರಮ 8 ನೇ ವಾರ್ಷಿಕ ಅಜ್ಮೀರ್ ಮೌಲೂದ್ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಪ್ರಭಾಷಣ ಹಾಗೂ ಇಸ್ಲಾಮಿಕ್ ಕಥಾಪ್ರಸಂಗ ಕಾರ್ಯಕ್ರಮ ಜಯನಗರ ಮದ್ರಸ ವಠಾರದಲ್ಲಿ ನಡೆಯಲಿದೆ.
ಇಂದು ಸಂಜೆ ನಡೆಯುವ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಪೇರೋಡ್ ಮುಹಮ್ಮದ್ ಅಝ್ಹರಿ ಉಸ್ತಾದ್ ರವರ ಪ್ರಭಾಷಣ ನಡೆಯಲಿದ್ದು ನಾಳೆ ಸಂಜೆ 7 ಗಂಟೆಗೆ ಖ್ಯಾತ ಕಥಾ ಪ್ರಸಂಗ ನಿರೂಪಕರಾದ ಝುಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ತಂಡದವರಿಂದ ಇಸ್ಲಾಮಿಕ್ ಕತಾ ಪ್ರಸಂಗ ಕಾರ್ಯಕ್ರಮ ನಡೆಯಲಿದೆ.
ಈ ಸಮಾರಂಭಕ್ಕೆ ಧಾರ್ಮಿಕ, ಸಾಮಾಜಿಕ,ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.