ಪುಳಿಕುಕ್ಕು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕರಾದ ಕೃಷ್ಣಕಾರಂತ.ಎಸ್ ರವರು ಡಿ.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.
ಪ್ರಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಜಕ್ಕೆ ದರ್ಖಾಸ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ : 23-09-1994 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿ ಅಲ್ಲಿ ಸುಮಾರು 4 ವರ್ಷ ಸೇವೆ ಸಲ್ಲಿಸಿ ನಂತರ ಸುಳ್ಯ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಳಿಕುಕ್ಕು ಇಲ್ಲಿಗೆ ದಿನಾಂಕ : 12-01-1999 ರಂದು ವರ್ಗಾವಣೆಹೊಂದಿ ಇಲ್ಲಿ ಕರ್ತವ್ಯವನ್ನು ನಿರ್ವಹಿಸಿ ಡಿ.31 ರ ರಂದು ಸೇವಾನಿವೃತ್ತಿಯನ್ನು ಹೊಂದಲಿದ್ದಾರೆ.
ಇವರು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದಿ.ಶಂಕರನಾರಾಯಣ ಕಾರಂತ.ಎಸ್ ಮತ್ತು ದಿ.ಶ್ರೀಮತಿ ಇಂದಿರಾ.ಎಸ್ ದಂಪತಿಯ ಪುತ್ರರಾಗಿರುತ್ತಾರೆ.