ಸುಳ್ಯ ನಗರ ಸೇರಿದಂತೆ ತಾಲೂಕಿನಲ್ಲಿ ಸುಳ್ಯದ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಸೇವೆ ನೀಡುತ್ತಿದ್ದು ಇದು ಸಾಕಾಗುತ್ತಿಲ್ಲ. ಆದ್ದರಿಂದ ಇನ್ನೆರಡು ಕಡೆ ಆಧಾರ್ ಕೇಂದ್ರ ತೆರೆಯಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಒತ್ತಾಯಿಸಿದ್ದಾರೆ.
ಈಗ ಸರಕಾರದ ಎಲ್ಲ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಬೇಕು. ಹಲವು ಮಂದಿಗೆ ಕಾರ್ಡ್ ಆಗಿಲ್ಲ. ಇನ್ನೂ ಕೆಲವು ಕಾರ್ಡ್ ಗಳಲ್ಲಿ ತಿದ್ದು ಪಡಿಗಳಿದೆ. ಈಗ ಸುಳ್ಯದ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಸೇವೆ ಸಿಗುತ್ತಿದೆ. ದಿನವೊಂದಕ್ಕೆ 15 ಮಂದಿ ಮಾತ್ರ ಪ್ರಯೋಜನ ಸಿಗುತ್ತಿದೆ. ಇದು ಸಾಕಾಗುತ್ತಿಲ್ಲ. ಆದ್ದರಿಂದ ಸುಳ್ಯದ ಇನ್ನೆರಡು ಕಡೆಯಲ್ಲಿ ಆಧಾರ್ ಸೇವೆ ಸಿಗುವ ಕೇಂದ್ರ ಆರಂಭಿಸಲು ಶಾಸಕರು ಸೂಚನೆ ನೀಡಬೇಕು. ಆ ಮೂಲಕ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.