ಜ. 11 ರಂದು ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ, ಡಿ.30 ರಿಂದ ನಾಮಪತ್ರ ಆರಂಭ

0

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಜ. 11 ರಂದು ಚುನಾವಣೆ ನಡೆಯಲಿದ್ದು, ಡಿ.30 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಸಾಮಾನ್ಯ ಕ್ಷೇತ್ರಕ್ಕೆ 6,
ಹಿಂದುಳಿದ ವರ್ಗ ಎ ಗೆ ಒಂದು,
ಹಿಂದುಳಿದ ವರ್ಗ ‘ಬಿ ‘ಸ್ಥಾನ ಒಂದು,
ಪರಿಶಿಷ್ಟ ಜಾತಿ ಮೀಸಲು ಒಂದು, ಪರಿಶಿಷ್ಟ ಪಂಗಡ ಮೀಸಲು ಒಂದು, ಮಹಿಳಾ ಮೀಸಲು 2 ಹೀಗೆ ಒಟ್ಟು 12 ನಿರ್ದೇಶರ ಆಯ್ಕೆ ಪ್ರಕ್ರಿಯೆ ನಢಯಲಿದೆ.
ಡಿ.30 ರಿಂದ ನಾಮಪತ್ರ ಆರಂಭವಾಗಲಿದ್ದು ಜ.3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಜ.4 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಜ.5 ರಂದು ನಾಮಪತ್ರ ಹಿಂತೆಗೆತ ಮಾಡಲು ಕೊನೆ ದಿನಾಂಕವಾಗಿರುತ್ತದೆ. ಅಂದೆ ಅಭ್ಯರ್ಥಿಗಳಿಗೆ ಚಿಹ್ನೆ ದೊರೆಯಲಿದ್ದು ಜ.11 ರಂದು ಚುನಾವಣೆ ನಡೆದು ಅಂದೇ ಫಲಿತಾಂಶ ದೊರೆಯಲಿದೆ.