ಮಹೇಶ್ ಕುಮಾರ್ ಕರಿಕ್ಕಳ ನೇತೃತ್ವದಲ್ಲಿ ನಾಗರಿಕ ಸಮಿತಿ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಕೆ
ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಜ. 2 ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಕಾಂಗ್ರೆಸ್ ನಾಯಕ ಮಹೇಶ್ ಕುಮಾರ್ ಕರಿಕ್ಕಳ ನೇತೃತ್ವದಲ್ಲಿ ನಾಗರಿಕ ಸಮಿತಿ ಹೆಸರಿನಲ್ಲಿ ಸ್ಪರ್ಧೆಗೆ ನಿರ್ಧರಿಸಲಾಗಿದ್ದು,
ಸಾಮಾನ್ಯ ಸ್ಥಾನದಿಂದ ಮಹೇಶ್ ಕುಮಾರ್ ಕರಿಕ್ಕಳ, ಗಣೇಶ್ ಪ್ರಸಾದ್ ಭೀಮಗುಳಿ, ಲಿಂಗಪ್ಪಗೌಡ ಮಡಪ್ಪಾಡಿ, ಪುರುಷೋತ್ತಮ ಭಟ್ ನೆಗಳಗುಂಡಿ, ರೋಹಿತ್ ಪಂಬೆತ್ತಾಡಿ, ಹಿಂದುಳಿದ ವರ್ಗ ಎ ವೆಂಕಪ್ಪ ಎನ್ ಪಿ ಬೆಳಗಜೆ, , ಹಿಂದುಳಿದ ವರ್ಗ ಬಿ ಲವಕುಮಾರ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನ ಧರ್ಮಣ ನಾಯ್ಕ ಗರಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನ ಗುರುವ ಕಲ್ಚಾರ್, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಶ್ರೀರಂಜಿನಿ ಪಂಜಬೀಡು, ಶ್ರೀಮತಿ ಲೀಲಾವತಿ ಎಚ್ಎಂ ಮೂಲೆಮನೆ, ಸಾಲಗಾರರಲ್ಲದ ಕ್ಷೇತ್ರದಿಂದ ಧನಂಜಯ ಮಡಪ್ಪಾಡಿ ನಾಮಪತ್ರ ಸಲ್ಲಿಸಿದ್ದಾರೆ.