ಪಂಜದಲ್ಲಿ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

0

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಆಶ್ರಯದಲ್ಲಿ ಪಂಚಶ್ರೀ ಜೀವ ರಕ್ಷಕ ಅಂಬ್ಯುಲೆನ್ಸ್ ನ 5ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ದ.ಕ.ಜಿಲ್ಲಾ ಅಮೆಚೂರು ಕಬ್ಬಡಿ ಅಸೋಸಿಯೇಶನ್ ಮತ್ತು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ 65 ಕೆ.ಜಿ ವಿಭಾಗದ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿ-2025 , ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ
ಜ.4 ರಂದು ಸಂಜೆ ಚಾಲನೆ ನಡೆಯಿತು.

ಪಂದ್ಯಾಟಕ್ಕೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.


ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಾಧವ ಬಿ ಕೆ , ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್, ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲೋಕೇಶ್ ಬರೆಮೇಲು, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ತೀರ್ಥಾನಂದ ಕೊಡೆಂಕಿರಿ ಸ್ವಾಗತಿಸಿದರು ಮತ್ತು ನಿರೂಪಿಸಿದರು.
ಬಳಿಕ ಪಂಜ ಪ್ರಾಥಮಿಕ ಶಾಲೆ, ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ,ನಾಗತೀರ್ಥ ಪ್ರಾಥಮಿಕ ಶಾಲೆ, ಅಲೆಕ್ಕಾಡಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪಂದ್ಯಾಟ ಆರಂಭ ಗೊಂಡಿತು.ಈ ಪಂದ್ಯಾಟದ ಬಳಿಕ 65 ಕೆ.ಜಿ ವಿಭಾಗದ ಪಂದ್ಯಾಟ ನಡೆಯಲಿದೆ.

ಕಬಡ್ಡಿ ಪಂದ್ಯಾಟದಲ್ಲಿ ವಿಜೇತ 8 ತಂಡಗಳಿಗೆ ಮತ್ತು ವೈಯಕ್ತಿಕ ಬಹುಮಾನಗಳು ಇರುತ್ತದೆ. ಪ್ರಥಮ ರೂ.25,025 ಮತ್ತು ಪಂಚಶ್ರೀ ಟ್ರೋಫಿ, ದ್ವಿತೀಯ ರೂ. 20,025 ಮತ್ತು ಪಂಚಶ್ರೀ ಟ್ರೋಫಿ ,ತೃತೀಯ ರೂ. 10,025 ಮತ್ತು ಪಂಚಶ್ರೀ ಟ್ರೋಫಿ,
ಚತುರ್ಥ ರೂ. 10,025 ಮತ್ತು ಪಂಚಶ್ರೀ ಟ್ರೋಫಿ,ಪಂಚಮ ರೂ. 3,025 ಮತ್ತು ಪಂಚಶ್ರೀ ಟ್ರೋಫಿ ,ಷಷ್ಠ ರೂ. 3,025, ಮತ್ತು ಪಂಚಶ್ರೀ ಟ್ರೋಫಿ,ಸಪ್ತಮ ರೂ. 3,025 ಮತ್ತು ಪಂಚಶ್ರೀ ಟ್ರೋಫಿ, ಅಷ್ಟಮ ರೂ. 3,025 ಮತ್ತು ಪಂಚಶ್ರೀ ಟ್ರೋಫಿ ಹಾಗೂ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್‌ರೌಂಡರ್ ತಲಾ ರೂ. 1,000 ಮತ್ತು ಶಾಶ್ವತ ಫಲಕ ಬಹುಮಾನ ವಿರುತ್ತದೆ. ಕಬಡ್ಡಿ ಪಂದ್ಯ ಕೂಟದ ಶಿಸ್ತುಬದ್ಧ ತಂಡಕ್ಕೆ ವಿಶೇಷವಾಗಿ ಪಂಚಶ್ರೀ ಟ್ರೋಫಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ರಾಮಯ್ಯ ಭಟ್ ,ಸಮಾಜ ಸೇವೆಕ , ಮುಳುಗು ತಜ್ಞ ಈಶ್ವರ್ ಮಲ್ಪೆ, ಭಾರತೀಯ ಭೂ ಸೇನೆಯ ಯೋಧ ಹರ್ಷಿತ್ ಎ.ಕೆ. ರವರಿಗೆ ಸನ್ಮಾನ ನಡೆಯಲಿದೆ.

ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ ಆರಂಭ ಗೊಂಡಿದೆ. ಪ್ರೇಕ್ಷರ ಅನುಕೂಲಕ್ಕಾಗಿ ಕ್ರೀಡಾಂಗಣ ಬಳಿ ದೊಡ್ಡ ಎಲ್.ಇ.ಡಿ ಸ್ಕ್ರೀನ್ ಅಳವಡಿಸಲಾಗುತ್ತದೆ.