ಶ್ರೀರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಹಾಗೂ ಅಯೋಧ್ಯಾ ರಂಗಮಂದಿರ ಉದ್ಘಾಟನೆ ಕಾರ್ಯಕ್ರಮ ಜ.8ರಂದು ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ನಡೆಯಲಿದೆ.
ಜ.8 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಬೆಳಿಗ್ಗೆ 9 ಗಂಟೆಗೆ ಅಯೋಧ್ಯಾ ರಂಗಮಂದಿರ ಉದ್ಘಾಟನೆ,ಬೆಳಿಗ್ಗೆ 9.30ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜಾರಂಭ,ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ,ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ಹಾಗೂ ಮನೋರಂಜನಾ ಕಾರ್ಯಕ್ರಮ, ರಾತ್ರಿ 7ರಿಂದ ಸ್ಥಳೀಯ ಹಾಗೂ ಆಯ್ದ ತಂಡಗಳಿಂದ ಕಾರ್ಯಕ್ರಮ ವೈವಿಧ್ಯ ,ರಾತ್ರಿ 8 ಗಂಟೆಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ ಆರ್ ವಹಿಸಲಿದ್ದಾರೆ.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯರಾದ ಶ್ರೀಮತಿ ಸರೋಜಿನಿ ಪೆಲ್ತಡ್ಕ ರವರನ್ನು ಗೌರವಿಸಿ ಸನ್ಮಾನಿಸಲಿದ್ದಾರೆ.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದರೆ,ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ|ಪುರುಷೋತ್ತಮ ಕೂಜುಗೋಡು,ಶ್ರೀರಾಮ ಭಜನಾ ಸೇವಾ ಸಂಘದ ಗೌರವಧ್ಯಕ್ಷ ರಾಮಚಂದ್ರ ಪೆಲ್ತಡ್ಕ ,ನಗರ ಪಂಚಾಯತ್ ಸದಸ್ಯೆ ವಾಣಿಶ್ರೀ ಬೊಳಿಯಮಜಲು, ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖಾ ಮಡಪ್ಪಾಡಿ,ಕಪಿಲ ಯುವಕ ಮಂಡಲ ಅಧ್ಯಕ್ಷ ಹರೀಶ್ ಜೆ ಬಿ ಉಪಸ್ಥಿತರಿರುವರು ಎಂದು ಶ್ರೀರಾಮ ಭಜನಾ ಸೇವಾ ಸಂಘದ ಉಪಾಧ್ಯಕ್ಷ ರಮಾನಂದ ರೈ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ,ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ