ದೇವಚಳ್ಳ ಶಾಲೆಯ ಶತಮಾನೋತ್ಸವದ ಸಂಭ್ರಮಕ್ಕೆ ದಿನಗಣನೆ

0

ಶಾಲಾ ಆರವಣದಲ್ಲಿ ನಿರ್ಮಾಣಗೊಂಡ ಸುಂದರ ಗಾರ್ಡನ್

ದಾನಿಗಳಿಂದ ಗಾರ್ಡನ್‌ಗೆ ಹುಲಿ, ದನ, ಆನೆ, ಪಕ್ಷಿ ಮೂರ್ತಿ ಚಿತ್ರಗಳ ಕೊಡುಗೆ

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಶಾಲಾ ಆವರಣದಲ್ಲಿ ಸುಂದರವಾದ ಗಾರ್ಡನ್ ನಿರ್ಮಿಸಲಾಗಿದ್ದು ಅದಕ್ಕೆ ದಾನಿಗಳು ಆನೆ, ಹುಲಿ, ದನ, ಪಕ್ಷಿಗಳ ಮೂರ್ತಿ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಹೀಗಾಗಿ ಶಾಲಾ ಗಾರ್ಡನ್ ಇನ್ನಷ್ಟು ಆಕರ್ಷಣೀಯವಾಗಿದೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಶಾಲಾ ಪರಿಸರದಿಂದ ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಎಲಿಮಲೆಯ ಪೃಥ್ವಿ ಚಿಕನ್ ಸೆಂಟರ್ ಮಾಲಕ ಸೀತಾರಾಮ ಹಲ್ದಡ್ಕರವರು ಗಾರ್ಡನ್ ನಲ್ಲಿ ಇಡಲು ಒಂದೂವರೆ ಲಕ್ಷ ಮೌಲ್ಯದ ಹುಲಿ, ದನ – ಕರು ನೀಡಿದ್ದಾರೆ. ಹಾಗೂ ಆನೆ ಮೂರ್ತಿ ಚಿತ್ರವನ್ನು ಎಲಿಮಲೆಯ ಆರ್.ಕೆ. ಜನರಲ್ ಸ್ಟೋರ್ ಮಾಲಕ ರಾಧಾಕೃಷ್ಣ ಮೈರ್ಪಳ್ಳ ಕೊಡುಗೆಯಾಗಿ ನೀಡಿದ್ದಾರೆ.