ಕ್ರೀಡೋತ್ಸವದ ಸಿದ್ಧತೆಯಲ್ಲಿದ್ದ ಶಾಲಾ ಗ್ರೌಂಡಿಗೆ ಬಂದ ಕಾಡಾನೆ

0

ಏನೆಕಲ್ಲಿನಲ್ಲಿ ನಡೆದ ಘಟನೆ

ಶಾಲಾ ಕ್ರೀಡೋತ್ಸವದ ಸಿದ್ಧತೆಯಲ್ಲಿದ್ದ ಗ್ರೌಂಡಿಗೆ ಕಾಡಾನೆ ಬಂದ ಘಟನೆ ಏನೆಕಲ್ಲಿನಲ್ಲಿ ನಡೆದಿದೆ.

ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವವು ನಾಳೆ ಮತ್ತು ನಾಡಿದ್ದು (ಜ. 3 ಮತ್ತು 4) ನಡೆಯಲಿದ್ದು, ಪೂರ್ವ ತಯಾರಿಯಾಗಿ ಸಿದ್ಧತೆಗಳು ನಡೆಯುತ್ತಿತ್ತು.
ಇದೇ ಸಂದರ್ಭ ಇಂದು ಸುಮಾರು ಎಂಟು ಗಂಟೆಯ ಹೊತ್ತಿಗೆ ಕಾಡಾನೆಯೊಂದು ಆ ದಾರಿಯಾಗಿ ಬಂದಿದ್ದು ಶಾಲಾ ಗ್ರೌಂಡ್ ಮಧ್ಯದಲ್ಲಿಯೇ ಹಾದುಹೋಯಿತು. ಗ್ರೌಂಡ್ ನಲ್ಲಿದ್ದ ಜನ ಬೊಬ್ಬೆ ಹೊಡೆಯತೊಡಗಿದಾಗ ಆನೆ ಮಲ್ಲಾರ ಗಂಗಾಧರವರ ಮನೆಯ ಎದುರಾಗಿ ಕಾಡಿನ ಕಡೆ ಹೋಯಿತು ಎಂದು ತಿಳಿದು ಬಂದಿದೆ.

ಶಾಲಾ ಗ್ರೌಂಡಿಗೆ ಬಂದ ಆನೆ ಯಾರಿಗೂ ಯಾವ ತೊಂದರೆಯೂ ಕೊಡದೆ ಸೀದಾ ಕಾಡಿನತ್ತ ತೆರಳಿದೆ.