ಸರ್ವ ಕ್ರೈಸ್ತ ವಿಭಾಗಗಳ ಐಕ್ಯತೆ ಮತ್ತು ಕಲ್ಯಾಣ ಕಾರ್ಯಗಳನ್ನು ಮುಂದಿಟ್ಟುಕೊಂಡು ಸಂಪಾಜೆಯಲ್ಲಿ ಸರ್ವ ಕ್ರೈಸ್ತ ಸಮುದಾಯ ಸಂಘಟನೆ ಎಂಬ ಹೆಸರಿನ ಸಂಘಟನೆ ಆರಂಭಗೊಂಡಿದ್ದು, ರಾಜೇಶ್ ಡಿಸೋಜ ಹಾಗೂ ಸಂತೋಷ್ ಕ್ರಾಸ್ತಾ ಇವರುಗಳು ದೀಪ ಬೆಳಗಿಸುವ ಮೂಲಕ ಜನವರಿ 1 ರಂದು ಉದ್ಘಾಟನೆಗೊಂಡಿತು.
ಈ ಸಮಾಜಕ್ಕೆ ಕ್ರೈಸ್ತರ ತ್ಯಾಗ ,ಸೇವೆ ಮತ್ತು ಕೊಡುಗೆಗಳ ಅರಿವು ಮೂಡಿಸುವುದು ಮತ್ತು ಸಮುದಾಯದ ದಮನಿತರು ಮತ್ತು ದೀನರಿಗೆ ನೆರವಾಗುವುದು ಹಾಗೂ ಸಮಾಜದ ಸೌಹಾರ್ದತೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸಂಘಟನೆಯ ಆಶಯ. ಇದಕ್ಕಾಗಿ ಎಲ್ಲಾ ಕ್ರೈಸ್ತ ಬಾಂಧವರನ್ನು ಒಗ್ಗೂಡಿಸಲಾಗುವುದು ಎಂದು ಸಂಘಟನೆಯ ಪ್ರಮುಖರಾದ ರಾಜೇಶ್ ಡಿಸೋಜ ಹಾಗೂ ಲೂಕಾಸ್ ಟಿ.ಐ, ಲ್ಯಾನ್ಸಿ ಡಿಸೋಜ ಇವರುಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮೈಕೆಲ್ ಪಾಯಸ್ , ಎಡ್ವೊಕೇಟ್ ಡೋಮಿನಿಕ್, ಸಂತೋಷ್ ಕ್ರಾಸ್ತಾ, ಬೆಂಜಮಿನ್ ಡಿಸೋಜ , ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯೆ ಲಿಸ್ಸಿ ಮೊನಾಲಿಸಾ ,ಜಾನಿ ಮತ್ತಿತರರು ಉಪಸ್ಥಿತರಿದ್ದರು.