ಅಮರಮುಡ್ನೂರು ಗ್ರಾಮದ ಬೊಳ್ಳೂರು ಜಯರಾಮ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿನ್ನೆ ರಾತ್ರಿ ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪುಷ್ಪಾವತಿ, ಪುತ್ರಿಯರಾದ ವಿದ್ಯಾ ಶಿವಾನಂದ ಕರೆಂಕ, ನಮಿತ ವಾಸುದೇವ ಗೆಜ್ಜೆ, ರೂಪ ದಿನೇಶ್ ನಿಡ್ದಾಜೆ, ಪುತ್ರ ನೀರಾವರಿ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ದಿನೇಶ್ ಬೊಳ್ಳೂರು, ಸೊಸೆ ರೇಷ್ಮ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.