ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ “ದಿ ಗ್ರೀನ್ ಹೀರೋ ಆಫ್ ಇಂಡಿಯಾ” ಡಾ. ಆರ್.ಕೆ ನಾಯರ್ ಭೇಟಿ”ಮೈ ಪ್ಲಾನೆಟ್ ಮೈ ಪ್ರೈಡ್” – ವಿಶೇಷ ಉಪನ್ಯಾಸ

0

“ದಿ ಗ್ರೀನ್ ಹೀರೋ ಆಫ್ ಇಂಡಿಯಾ” ನಾಮಾಂಕಿತರಾದ ಉದ್ಯಮಿ, ಪರಿಸರ ಪ್ರೇಮಿ, ಡಾ. ರಾಧಾಕೃಷ್ಣ ನಾಯರ್ ಜ. 04ರಂದು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ “ಮೈ ಪ್ಲಾನೆಟ್ ಮೈ ಪ್ರೈಡ್ ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಮೊದಲು ಆಸ್ಪತ್ರೆಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕಾಲೇಜಿನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ವಹಿಸಿ, ಶುಭ ಹಾರೈಸಿದರು.


ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟ ಡಾ. ಆರ್.ಕೆ. ನಾಯರ್ “ಮೈ ಪ್ಲಾನೆಟ್ ಮೈ ಪ್ರೈಡ್ ” ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಆರ್ಥೋಪೆಡಿಕ್ ವಿಭಾಗದ ಸಹ ಪ್ರಾಧ್ಯಪಕರೂ, ಇಕೋ ಕ್ಲಬ್ ಸಂಚಾಲಕರೂ ಆಗಿರುವ ಡಾ. ರೋಷನ್ ಎಸ್.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪ್ರದೀಶ ಕಾಮತ್ ಸ್ವಾಗತಿಸಿ, ಚಿರಾಗ್ ಗೌಡ ವಂದಿಸಿದರು.


ಅಭಿನಂದನ್ ಟಿ.ಎ ಹಾಗೂ ಹರ್ಷಿತಾ ಜೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.