ನಿಂತಿಕಲ್ಲಿನಲ್ಲಿ ಶ್ರೀದೇವಿ ಪೆಸ್ಟಿಸೈಡ್ (ಕೀಟನಾಶಕ) ಅಗ್ರಿಟೆಕ್ ಶುಭಾರಂಭ.

0

⬆️ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ ನಿಂದ ದುಪ್ಪಟ್ಟು ಇಳುವರಿ: ಶಶಿಕುಮಾರ್ ರೈ ಬಾಲ್ಯೂಟ್ಟು

⬆️ ಮಣ್ಣಿನ ಫಲವತ್ತತೆಗೆ,ಉತ್ತಮ
ಬೆಳೆಗೆ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್: ಎಂ ಶರ್ಮ

⬆️ ಬೆಳೆ ನೀಡುವ ಮರ,ಗಿಡಗಳ ಆರೋಗ್ಯಕ್ಕೆ ಉತ್ತಮ ಗೊಬ್ಬರ ಇದು: ಶ್ರೀಮತಿ ರಾಜೀವಿ ರೈ

⬆️ ಶ್ರೀ ದೇವಿ ಅಗ್ರಿಟೆಕ್ ಉತ್ತಮ ಸೇವೆ ನೀಡುತ್ತಿರುವ ಸಂಸ್ಥೆ: ಲೋಕನಾಥ ರೈ ಎನ್ ಜಿ

ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ನಲ್ಲಿರುವ ಶ್ರೀದೇವಿ ಅಗ್ರಿಟೆಕ್
ಇದರ ಸಹಯೋಗದ ಸಂಸ್ಥೆ
ಶ್ರೀದೇವಿ ಪೆಸ್ಟಿಸೈಡ್ (ಕೀಟನಾಶಕ) ಅಗ್ರಿಟೆಕ್ ಇದರ ಶುಭಾರಂಭ ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ಸಂಕೀರ್ಣದಲ್ಲಿ ಜ.8 ರಂದು ನಡೆಯಿತು.


ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ,
ಉದ್ಘಾಟಿಸಿ ಮಾತನಾಡಿ. “ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ ಬಳಕೆಯಿಂದ ದುಪ್ಪಟ್ಟು ಇಳುವರಿ ಪಡೆಯಲು ಸಾಧ್ಯ. ನಿಂತಿಕಲ್ಲು ಶ್ರೀ ದೇವಿ ಅಗ್ರಿಟೆಕ್ ನ ಮಾಲಕ ತಿಮ್ಮಪ್ಪ ರೈ ರವರ ಸೇವೆಗೆ
ಕಂಪೆನಿಯವರು ಈ ಬಾರಿ ಬ್ರೆಝಾ ಕಾರು ಉಡುಗೊರೆ ನೀಡಿದ್ದಾರೆ. ಕೃಷಿಕರು ಅವರಿಗೆ ಇನ್ನಷ್ಟು ಸಹಕರಿಸಿ ಪ್ರೋತ್ಸಾಹಿಸುವ.”ಎಂದು ಹೇಳಿದರು.
ಪ್ರಗತಿ ಪರ ಕೃಷಿಕ ಪದ್ಮನಾಭ ರೈ ಎಂಜೀರು ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಸುಬ್ರಹ್ಮಣ್ಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ ಪುಡ್ಕಜೆ ಮಾತನಾಡಿ “ಮನುಷ್ಯ ದೇಹದ ಆರೋಗ್ಯಕ್ಕೆ ಉತ್ತಮ ಆಹಾರ ಎಷ್ಟು ಮುಖ್ಯವೋ . ಬೆಳೆ ನೀಡುವ ಮರ ಗಿಡಗಳ ಆರೋಗ್ಯಕ್ಕೆ ಉತ್ತಮ ನಂಬಿಕೆಯ ಗೊಬ್ಬರ ಮುಖ್ಯ. ನಿಂತಿಕಲ್ಲು ಶ್ರೀ ದೇವಿ ಅಗ್ರಿಟೆಕ್ ಸಂಸ್ಥೆಯಲ್ಲಿ ಅಂತಹ ಉತ್ತಮ ಗೊಬ್ಬರಗಳು, ಕೀಟನಾಶಕಗಳು ದೊರೆಯುತ್ತದೆ”. ಎಂದು ಹೇಳಿದರು.

ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ ಹೊಳಲ್ಕೆರೆ ಇದರ ಜನರಲ್ ಮ್ಯಾನೇಜರ್ ಎಂ. ಶರ್ಮ ಮಾತನಾಡಿ, “ನಿಂತಿಕಲ್ಲು ಶ್ರೀ ದೇವಿ ಅಗ್ರಿಟೆಕ್ ದಕ್ಷಿಣ ಕನ್ನಡದಲ್ಲಿ ಟಾಪ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ.
ಸಿಕ್ಕ ವಿಷಕಾರಿಯನ್ನು ಮಣ್ಣಿಗೆ ಬೆರೆಸಿ ನಮ್ಮ ಮಣ್ಣನ್ನು ಹಾಳು ಮಾಡುತ್ತಿದ್ದೇವೆ. ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ ನವನವೀನ ತಂತ್ರಜ್ಞಾನದಿಂದ ತಯಾರಿಸಿದ ಸಾವಯವ ಗೊಬ್ಬರಗಳನ್ನು ಬಳಸಿ ಪರೀಕ್ಷಿಸಿ ಬದಲಾವಣೆ ನೀವೇ ನೋಡಿ’ ಎಂದು ಹೇಳಿದರು.

ಪ್ರಗತಿ ಪರ ಕೃಷಿಕ ಎನ್. ಜಿ. ಲೋಕನಾಥ ರೈ ಮಾತನಾಡಿ “ನಿಂತಿಕಲ್ಲು ಶ್ರೀ ದೇವಿ ಅಗ್ರಿಟೆಕ್ ನಲ್ಲಿ ಉತ್ತಮ ರೀತಿಯ ಗೊಬ್ಬರಗಳು ದೊರೆಯುತ್ತದೆ. ಕೃಷಿಕರಿಗೆ ಉತ್ತಮ ಮಾಹಿತಿ ನೀಡುತ್ತಿದ್ದಾರೆ. ಅದರ ಮಾಲಕ ತಿಮ್ಮಪ್ಪ ರೈ ರವರು ಎಲ್ಲರ ಪ್ರೀತಿ, ವಿಶ್ವಾಸ, ಗೌರವ ಗಳಿಸಿದ್ದಾರೆ. ” ಎಂದು ಹೇಳಿದರು.
ಪ್ರಗತಿ ಪರ ಕೃಷಿಕ ಬಾಲಕೃಷ್ಣ ರೈ ಪೊಯ್ಯೋತ್ತೂರು, ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ಮಾಲಕ ಎಂ. ಮಾಧವ ಗೌಡ ಕಾಮಧೇನು, ಹಾಗೂ ಸಂಸ್ಥೆಯ ಮಾಲಕರಾದ ಶ್ರೀಮತಿ ಮಾಲತಿ ಟಿ. ರೈ ಮತ್ತು ಬಿ. ಜಿ. ತಿಮ್ಮಪ್ಪ ರೈ ಬಜದಗುತ್ತು , ಶ್ರೀಮತಿ ತನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಸಂಧ್ಯಾ ಮಂಡೆಕೋಲು ಪ್ರಾರ್ಥಿಸಿದರು. ವಸಂತ ಯನ್ ಟಿ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಬಿ. ಜಿ. ತಿಮ್ಮಪ್ಪ ರೈ ಸ್ವಾಗತಿಸಿದರು ಮತ್ತು ವಂದಿಸಿದರು. ಸಿಬ್ಬಂದಿಗಳಾದ ಚೈತ್ರ, ಅಕ್ಷತಾ, ಸಿದ್ದಿಕ್
ಸಹಕರಿಸಿದರು.