ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗನಕಟ್ಟೆ ನವೀಕರಣಕ್ಕೆ ಅನುಜ್ಞಾ ಕಲಶ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಾಣವಾಗುವ ಚಿತ್ರಕೂಟ ನಾಗನಕಟ್ಟೆ ನವೀಕರಣಕ್ಕೆ ಅನುಜ್ಞಾ ಕಲಶವು ಜ.8 ರಂದು ನಡೆಯಿತು.


ಬ್ರಹ್ಮ ಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಉದಯ ಕುಮಾರ್ ಕೆ.ಟಿ.ಸಹಕರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸದಸ್ಯರಾದ ಗಂಗಾಧರ ರೈ ಪುಡ್ಕಜೆ,ರಾಧಾಕೃಷ್ಣ ಕುಲಾಲ್, ಉದಯಪ್ರಸಾದ್ ಅಜಪಿಲ, ವಿಶ್ವನಾಥ ಭಟ್,ಶ್ರೀಮತಿ ಶಮಿತ,ಶ್ರೀಮತಿ‌ ನವಪ್ರಭ ,ದೇವಸ್ಥಾನದ ಕಚೇರಿ ನಿರ್ವಾಹಕ ಮಹೇಶ್ ಕಲ್ಪಣೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.