ಅಂಬಟೆಡ್ಕ ವೆಂಕಟರಮಣ ದೇವ ಮಂದಿರದಲ್ಲಿ ಯೋಗ ಶಿಕ್ಷಣ ತರಬೇತಿ ಶಾಖೆಯ ಉದ್ಘಾಟನೆ

0

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ಅಂಬಟೆಡ್ಕ ಶ್ರೀ ವೆಂಕಟರಮಣ ದೇವ ಮಂದಿರದ ಯೋಗ ಶಾಖೆಯನ್ನು ಇಂದು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಭವನ ಶಾಖೆಯ ಹೇಮನಾಥ ರವರು ವಹಿಸಿದ್ದರು.

ಗುರುಪ್ರಸಾದ್ ಶಾಮಿಯಾನದ ಮಾಲಕ ಜಿ.ಜಿ.ನಾಯಕ್ ರವರು ದೀಪ ಪ್ರಜ್ವಲಿಸಿ ಮಾತನಾಡಿ” ಪುರಾತನ ಇತಿಹಾಸವಿರುವ ಯೋಗ ಅಭ್ಯಾಸವನ್ನು ನಾವುಗಳು ಮರೆತಿರುವುದು ವಿಪರ್ಯಾಸ. ವಿದೇಶಿಯರು ಇದನ್ನು ಬಹಳ ಅರ್ಥ ಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಪರಿಸರದಲ್ಲಿ ಎಸ್.ಪಿ.ವೈ.ಎಸ್.ಎಸ್. ಸಮಿತಿಯ ವತಿಯಿಂದ ಯೋಗ ಅಭ್ಯಾಸ ಶಿಬಿರ ಹಮ್ಮಿಕೊಂಡಿರುವುದು ಅಭಿನಂದನೀಯ. ನಿರಂತರವಾಗಿ ಯೋಗ ಅಭ್ಯಾಸ ತರಗತಿಯನ್ನು ಮುಂದುವರಿಸಿಕೊಂಡು ಹೋಗುವಂತಾಗಲಿ ಎಂದು ಹೇಳಿದರು.

ಎಸ್.ಪಿ.ವೈ.ಎಸ್.ಎಸ್. ಪುತ್ತೂರು ತಾಲೂಕು ಸಂಚಾಲಕ ಕೃಷ್ಣಾನಂದ ರವರು ಯೋಗ ಶಿಕ್ಷಣದ ಅಗತ್ಯತೆಯ ಕುರಿತು ಬೋಧಿಸಿದರು. ಶ್ರೀಮತಿ ಸತ್ಯವತಿ ಯವರು ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಜಲಜಾಕ್ಷಿ ಸ್ವಾಗತಿಸಿದರು. ಶ್ರೀಮತಿ ಮೀನಾಕ್ಷಿ ವಂದಿಸಿದರು. ಯೋಗ ಶಿಕ್ಷಕಿ ಶ್ರೀಮತಿ ನಿಶಿತಾ ಕೇರ್ಪಳ ರವರು ಕಾರ್ಯಕ್ರಮ ನಿರೂಪಿಸಿದರು.


ಯೋಗ ಶಿಕ್ಷಕಿ ಶ್ರೀಮತಿ ಸುನಂದ ರವರು ಯೋಗ ತರಬೇತಿಯ ಶಿಬಿರಾರ್ಥಿಗಳಿಗೆ ಸಲಹೆ ಸೂಚನೆಯನ್ನು ನೀಡಿದರು. ಆರಂಭದಲ್ಲಿ ಆಲೆಟ್ಟಿ ಶ್ರೀ ಸದಾಶಿವ ಶಾಖೆಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಬಂಟರ ಭವನ ಶಾಖೆಯ ಹಾಗೂ ಆಲೆಟ್ಟಿ ಸದಾಶಿವ ಶಾಖೆಯ ಯೋಗ ಬಂಧುಗಳು ಭಾಗವಹಿಸಿದರು.