ಪೈಲಾರಿನಲ್ಲಿ ಜ್ಞಾನ ವಿಕಾಸ ವತಿಯಿಂದ ಸೃಜನಶೀಲ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವತಿಯಿಂದ ಪೈಲಾರಿನಲ್ಲಿ ಸೃಜನಶೀಲ ಕಾರ್ಯಕ್ರಮ ಜ. 12 ರಂದು ನಡೆಯಿತು.

ಉದ್ಘಾಟನೆಯನ್ನು ಸ್ತ್ರೀ ರೋಗ ತಜ್ಞರಾದ ಡಾ.ವೀಣಾ ನಡೆಸಿದರು. ಮತ್ತು ಗರ್ಭಕೋಶ ಹೆಂಗಸರ ಮುಟ್ಟಿ ನ ತೊಂದರೆ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಮಾಹಿತಿ ನೀಡಿದರು.

ಕೀಳು ಮತ್ತು ಮೂಳೆ ತಜ್ಞ ರಾದ ಡಾ.ಭವಾನಿಶಂಕರ ರವರು ಬಿಪಿಯ ಬಗ್ಗೆ ತಪಾಸಣೆ ನಡೆಸಿದರು.ಡಾ.ವೆಂಕಟೇಶ ರವರು ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ನಡೆಸಿದರು. ಸದಸ್ಯರಿಗೆ ಇಸಿಜಿ ತಪಾಸಣೆ ನಡೆಸಿದರು. ಶ್ರಿ ರಾಮ ಭಜನಾ ಮಂಡಳಿ ಅಧ್ಯಕ್ಷ ರಾದ ನಾರಾಯಣ ಕೊಡ್ತುಗುಳಿ ಉಪಸ್ಥಿತರಿದ್ದು, ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಜ್ಞಾನ ವಿಕಾಸ ಕೇಂದ್ರ ಸಂಯೋಜಕಿ ನಾಗವೇಣಿ ಮೋಂಟಡ್ಕ ವಹಿಸಿದ್ದರು.

ತಾಲೂಕು ಜ್ಞಾನ ವಿಕಾಸ ಕೇಂದ್ರ ದ ಸಮನ್ವಯ ಅಧಿಕಾರಿ ಲಕ್ಷ್ಮಿ ರವರು ಕಾರ್ಯಕ್ರಮ ನಿರೂಪಿಸಿ, ಸೇವಪ್ರತಿನಿಧಿ ಚಂದ್ರಪ್ರಕಾಶ್ ಸ್ವಾಗತಿಸಿ, ಮನೋರಮಾ ಕಡಪಳ ಧನ್ಯವಾದ ಸಮರ್ಪಿಸಿದರು. ಜ್ಞಾನ ವಿಕಾಸ ಮತ್ತು ಒಕ್ಕೂಟ ದ ಸದಸ್ಯರು ಉಪಸ್ಥಿತರಿದ್ದರು.