ಖ್ಯಾತ ವಾಗ್ಮಿ ಧಾರ್ಮಿಕ ಪ್ರಭಾಷಣಕಾರರಾದ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ರವರು ಜ. 13 ರಂದು ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ ನೂತನ ಕಚೇರಿಗೆ ಭೇಟಿ ನೀಡಿದರು.
ಅವರು ಪುತ್ತೂರಿನಲ್ಲಿ ನಡೆದ ಉರೂಸ್ ಸಮಾರಂಭದ ಪ್ರಭಾಷಣ ಮುಗಿಸಿ ಸುಳ್ಯಕ್ಕೆ ಬರುತಿದ್ದ ವೇಳೆ ಪೈಚಾರ್ ನ ಅಲ್ ಅಮೀನ್ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಸದಸ್ಯರೊಂದಿಗೆ ಅಲ್ಪ ಸಮಯ ಬೆರೆತು ಟ್ರಸ್ಟ್ನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಪ್ರಶಂಸೆ ವ್ಯಕ್ತ ಪಡಿಸಿದರು. ಬಳಿಕ ಪ್ರಾರ್ಥನೆ ನೆರವೇರಿಸಿ ಸಂಸ್ಥೆಗೆ ಶುಭಾರೈಸಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷ ಸತ್ತಾರ್ ಪೈಚಾರ್, ಕಾರ್ಯದರ್ಶಿ ಸಾಲಿ ಪೈಚಾರ್, ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಶಮೀರ್ ನಈಮಿ, ಕಮಿಟಿ ಅಧ್ಯಕ್ಷ ಹಾಜಿ ಪಿ ಇಬ್ರಾಹಿಂ,ಕಾರ್ಯದರ್ಶಿ ಹನೀಫ್ ಪಿ ಕೆ,ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಬೆಂಗಳೂರು ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ ಆರ್ ಬಿ ಬಶೀರ್,ಹಾಗೂ ಅಲ್ ಅಮೀನ್ ಯೂತ್ ಸೆಂಟರ್ ಇದರ ಪದಾಧಿಕಾರಿಗಳು, ಸದಸ್ಯರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.