ಜ. 18 : ಸುಳ್ಯದಲ್ಲಿ ‘ಅರೆಭಾಷೆ ಕಲಾವಿದರ ಒಕ್ಕೂಟ’ ರಚಿಸುವ ಕುರಿತು ಸಭೆ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಲಾವಿದರ ಒಕ್ಕೂಟ ರಚಿಸುವ ಕುರಿತು ಜ.18ರಂದು ಅಪರಾಹ್ನ 3 ಗಂಟೆಗೆ ಸುಳ್ಯದ ವೆಂಕಟರಮಣ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ಸಭೆ ನಡೆಯಲಿದೆ.

ಸುಳ್ಯ,‌ಕೊಡಗು ಮತ್ತು ಕೇರಳದ ಗಡಿಭಾಗದಲ್ಲಿ ಪ್ರಮುಖ ಭಾಷೆಯಾಗಿ ಹಿರಿಮೆಯನ್ನು ಹೊಂದಿರುವ ಅರೆಭಾಷಿಕ ಕಲಾವಿದರನ್ನು ಸಂಘಟಿಸುವ ಸಲುವಾಗಿ ‘ಅರೆಭಾಷಾ ಕಲಾವಿದರ ಒಕ್ಕೂಟ’ವನ್ನು ರಚಿಸಲು ಉದ್ದೇಶಿಸಿದ್ದು ಅರೆಭಾಷೆಯನ್ನು ಮಾತೃಭಾಷೆಯನ್ನಾಗಿಸಿಕೊಂಡಿರುವ ಮತ್ತು ಅರೆಭಾಷಿಕರಲ್ಲದಿದ್ದರೂ ಅರೆಭಾಷೆಯ ಮೇಲೆ ಅಭಿಮಾನ ಹೊಂದಿರುವ ಕಲಾವಿದರು ಈ ಒಕ್ಕೂಟದಲ್ಲಿ ಸೇರಿಕೊಳ್ಳಬಹುದು. ಅರೆಭಾಷೆಯನ್ನು ಕಲಾಮಾಧ್ಯಮವಾಗಿ ಬಳಸಿಕೊಂಡಿರುವ ಗಾಯಕರು, ಸೋಬಾನೆ ಹಾಡುವವರು, ಮಿಮಿಕ್ರಿ ಕಲಾವಿದರು, ನೃತ್ಯಪಟುಗಳು, ಭಜಕರು, ಯಕ್ಷಗಾನ ಕಲಾವಿದರು ಸೇರಿದಂತೆ ಇನ್ನಿತರ ಯಾವುದೇ ಕಲಾ ಪ್ರಕಾರಗಳ ಮೂಲಕ ಅರೆಭಾಷೆಯನ್ನು ಉಳಿಸಿ ಬೆಳೆಸಲು ಸಹಕರಿಸುತ್ತಿರುವ ಎಲ್ಲಾ ಕಲಾವಿದರು ಈ ಒಕ್ಕೂಟದಲ್ಲಿ ಜೊತೆಯಾಗಬೇಕೆಂದು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.