ಫೆ. 22: ಸುಳ್ಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ, ಪೂರ್ವಭಾವಿ ಸಭೆ

0

ಲಯನ್ಸ್ ಕ್ಲಬ್ ಸುಳ್ಯ ಇದರ ಆತಿಥ್ಯದಲ್ಲಿ
2024-25ನೇ ಸಾಲಿನ ಲಯನ್ಸ್ ಪ್ರಾಂತೀಯ ಸಮ್ಮೇಳನ ‘ವರ್ಣ’ ಫೆ. 22ರಂದು ಸುಳ್ಯದ ಬಂಟರ ಭವನ ಕೇರ್ಪಳದಲ್ಲಿ ಪ್ರಾಂತೀಯ ಅಧ್ಯಕ್ಷ ಲ. ಗಂಗಾಧರ ರೈಯವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಈ ಬಗ್ಗೆ ಪ್ರಥಮ ಪೂರ್ವಭಾವಿ ಸಭೆ ಸುಳ್ಯ ಲಯನ್ಸ್ ಕ್ಲಬ್‌ನ ಸಭಾಂಗಣದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ. ಗಂಗಾಧರ ರೈಯವರ ಅಧ್ಯಕ್ಷತೆಯಲ್ಲಿ ಜ. 16ರಂದು ನಡೆಯಿತು. ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ ಲ. ಜಯಪ್ರಕಾಶ್ ರೈಯವರು ಸಮ್ಮೇಳನದ ರೂಪುರೇಷೆಗಳನ್ನು ಸಭೆಗೆ ವಿವರಿಸಿದರು.

ವೇದಿಕೆಯಲ್ಲಿ ಪ್ರಾಂತೀಯ ರಾಯಭಾರಿ ಲ. ರೇಣುಕಾ ಸದಾನಂದ ಜಾಕೆ MJF, ವಲಯಾಧ್ಯಕ್ಷರುಗಳಾದ ಲ. ರೂಪಶ್ರೀ ಜೆ. ರೈ, ಮತ್ತು ಲ. ರಂಗಯ್ಯ ಶೆಟ್ಟಿಗಾರ್ PMJF, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ರಾಮಕೃಷ್ಣ ರೈ MJF, ಪ್ರಾಂತೀಯ ಸಮ್ಮೇಳನದ ಕಾರ್ಯದರ್ಶಿ ಲ. ದೀಪಕ್ ಕುತ್ತಮೊಟ್ಟೆ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಖಜಾಂಜಿ ಲ. ರಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಮಾಜಿ ಪ್ರಾಂತ್ಯಾಧ್ಯಕ್ಷರುಗಳಾದ ಲ. ಪ್ರೊ. ಬಾಲಚಂದ್ರ ಗೌಡ MJF, ಲ. ಜಯಂತ ರೈ, ಲ. ಸಂಧ್ಯಾ ಸಚಿತ್ ರೈ MJF, ಸೇರಿದಂತೆ ಪ್ರಾಂತ್ಯ 7ರ ಎಲ್ಲಾ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕೋಶಾಧಿಕಾರಿಗಳು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಮ್ಮೇಳನದ ಅಧ್ಯಕ್ಷ ಲ. ಗಂಗಾಧರ ರೈ ಸ್ವಾಗತಿಸಿ, ಖಜಾಂಜಿ ಲ. ದೊಡ್ಡಣ್ಣ ಬರೆಮೇಲು ವಂದಿಸಿದರು.