ಕಾಮಧೇನು ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಬೆಳ್ಳಾರೆ ಇದರ ಸಹಭಾಗಿತ್ವದಲ್ಲಿ ಕಾಮಧೇನು ಗ್ರಾಮವಿಕಾಸ ಸ್ವ ಸಹಾಯ ಸಂಘದ ಗುಂಪು ರಚನೆ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜ.19 ರಂದು ನಡೆಯಿತು.
ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ಹಾಗೂ ನಿರ್ದೇಶಕ ವೆಂಕಪ್ಪ ಗೌಡ ಕೆಯ್ಯೂರು ಸಭಾ ನಡವಳಿಕೆ ಪುಸ್ತಕವನ್ನು ಸಂಘದ 8 ಸದಸ್ಯರಿಗೆ ಹಸ್ತಾಂತರಮಾಡಿದರು.
ಸಂಘಕ್ಕೆ ಪಂಚಶ್ರೀ ಎಂದು ನಾಮಕರಣ ಮಾಡಲಾಯಿತು.ಸಂಘದ ಅಧ್ಯಕ್ಷ ಪದ್ಮನಾಭ ಕರ್ಬು ನೆಕ್ಕಿಲ,ಕಾರ್ಯದರ್ಶಿಯಾಗಿ ಭಾಗೀರಥಿ ಸಂಪ ಇವರನ್ನು ನೇಮಕಮಾಡಲಾಯಿತು.