
ಇನ್ಸ್ಪೈರ್ ಡಾನ್ಸ್ crew ಇವರು ಜ.18 ರಂದು ಭಟ್ಕಳದಲ್ಲಿ ನಡೆಸಿದ ರಾಜ್ಯ ಮಟ್ಟದ “ಸಂಭ್ರಮ 2025” ಶೈನಿಂಗ್ ನೈಟ್ಸ್ ಸಂಗೀತ ಸ್ಪರ್ಧೆಯಲ್ಲಿ ಸುಳ್ಯದ ‘ಅಶ್ವಿಜ್ ಅತ್ರೇಯ’ ದ್ವಿತೀಯ ವಿಜೇತ ಸ್ಥಾನ ಪಡೆದುಕೊಂಡಿದಾರೆ .

ಈ ಸ್ಪರ್ಧೆಯ ನಿರ್ಣಾಯಕರಾಗಿ ಎದೆ ತುಂಬಿ ಹಾಡುವೆನು ಖ್ಯಾತಿಯ ಗಂಗಾಧರ್ ಮತ್ತು ಅಖಿಲಾ ಇವರು ನಿರ್ವಹಿಸಿದ್ದು ಮಹೇಶ್ ಭಟ್ಕಳ ಹಾಗೂ ಗಣೇಶ್ ಭಟ್ಕಳ ಇವರ ಅದ್ಭುತ ನಿರೂಪಣೆಯೊಂದಿಗೆ ಅದ್ದೂರಿ ವೇದಿಕೆಯಲ್ಲಿ ನಡೆದು ಉತ್ತರಕನ್ನಡ ಜಿಲ್ಲೆಯ ಜನಮನ ಸೂರೆಗೊಂಡಿರುತ್ತಾನೆ.
ಅಡಿಷನ್ ನಲ್ಲಿ ರಾಜ್ಯದ ವಿವಿಡೆಡೆಯಿಂದ್ 170 ಮಂದಿ ಭಾಗವಹಿಸಿದ್ದು ಅಂತಿಮ ಹಂತಕ್ಕೆಆಯ್ಕೆ ಆದ ಟಾಪ್ 15 ಸ್ಪರ್ಧಿಗಳಲ್ಲಿ ಅಂತಿಮ ಹಣಾಹಣಿ ನಡೆದು ಅಶ್ವಿಜ್ ಆತ್ರೇಯ ಇವರು ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರು ಸುಳ್ಯದ ಪ್ರಭು ಬುಕ್ ಸೆಂಟರ್ ಮಾಲಕರಾದ ಉಷಾ ಕುಮಾರಿ ಮತ್ತು ರಾಮಚಂದ್ರ ದಂಪತಿ ಪುತ್ರ .
ಸೈಂಟ್ ಜೋಸೆಪ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿರುವ ಇವರು ಗಾನಸಿರಿ ಸುಗಮ ಸಂಗೀತ ಕಲಾಕೇಂದ್ರ ಸುಳ್ಯ ಮತ್ತು ಸುನಾದ ಶಾಸ್ತ್ರೀಯ ಸಂಗೀತ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
