ಕಲ್ಲುಗುಂಡಿ :ಬೀಡಾ ಅಂಗಡಿಯಲ್ಲಿ ಜೂಜಾಟದ ಆರೋಪ, ಪೊಲೀಸರ ದಾಳಿ ಓರ್ವನ ಬಂಧನ

0

ಕಲ್ಲುಗುಂಡಿ ಪೇಟೆಯ ಪಾನ್ ಬೀಡಾ ಅಂಗಡಿಯಲ್ಲಿ ಜೂಜು ಆಟ ನಡೆಯುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು ಓರ್ವನನ್ನು ವಶಕ್ಕೆ ಪಡೆದ ಘಟನೆ ಜ.20 ರಂದು ಸಂಜೆ ನಡೆದಿದೆ.

ಕಲ್ಲುಗುಂಡಿಯ ಕೆನರಾ ಬ್ಯಾಂಕ್ ಎದುರು ಮುಸ್ತಾಫಾ ಬಿ.ಆರ್ ಎಂಬವರು ಸುಮಾರು ವರ್ಷಗಳಿಂದ ಪಾನ್ ಬೀಡಾ ಅಂಗಡಿಯನ್ನು ನಡೆಸುತ್ತಿದ್ದರು. ಅದರಲ್ಲಿ ಅವರು ಮಟ್ಕಾ ಅಡ್ಡೆಯನ್ನು ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು,ಈ ಹಿನ್ನಲೆಯಲ್ಲಿ
ಮಾಹಿತಿ ಮೇರೆಗೆ ಕಲ್ಲುಗುಂಡಿ ಹೊರಠಾಣಾ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.