ಸುಳ್ಯ ಮೆಸ್ಕಾಂ ಬಳಿಯ ಗ್ಯಾರೇಜೊಂದರಿಂದ ಕಬ್ಬಿಣದ ವಸ್ತುವನ್ನು ಕಳವುಗೈದು ಗೊತ್ತೊಯ್ಯುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ವಾಪಾಸು ಗ್ಯಾರೇಜ್ ಗೆ ಅವನಲ್ಲೇ ತಂದು ಹಾಕಿಸಿರುವ ಘಟನೆ ವರದಿಯಾಗಿದೆ.
ಮದ್ಯ ಸೇವಿಸಿ ತೂರಾಡುತ್ತಿದ್ಸ ವ್ಯಕ್ತಿಯೊಬ್ಬ ಕಬ್ಬಿಣದ ವಸ್ತುವೊಂದನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿದ್ದನೆಂದು, ಆತನನ್ನು ವಿಚಾರಿಸಿದಾಗ, ಕಳವುಗೈದ ವಿಷಯ ಗೊತ್ತಾಗಿ ಯುವಕರು ಸೇರಿದರು. ಆತನಿಗೆ ಎರಡೇಟು ಕೊಟ್ಟು ವಾಪಸು ಅವನಲ್ಲೇ ಗ್ಯಾರೇಜ್ ಗೆ ತಂದು ಹಾಕಿಸಿದರೆಂದು ತಿಳಿದುಬಂದಿದೆ.
ಕುಡಿದ ನಶೆಯಲ್ಲಿರುವ ಕಬ್ಬಿಣ ಹೊತ್ತೊಯ್ದಾತ ಮಡಿಕೇರಿಯವನೆಂದು ಹೇಳುತ್ತಿದ್ದನೆಂದು ತಿಳಿದುಬಂದಿದೆ.