ಅದ್ವೈತ್ ಹುಂಡೈ ಸುಳ್ಯ ಇದರ ವತಿಯಿಂದ ಹುಂಡೈ ನಡಿಗೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಜ. 23ರಂದು ಅರಂತೋಡು ಸೊಸೈಟಿ ಆವರಣದಲ್ಲಿ ನಡೆಯಿತು.
ಎಲ್ಲಾ ಕಾರುಗಳ ಉಚಿತ ತಪಾಸಣೆ ಮತ್ತು ಸಲಹೆ ನಡೆಯಿತು. ಅಲ್ಲದೆ ಹುಂಡೈ ಹೊಸ ಕಾರುಗಳ ಟೆಸ್ಟ್ ಡ್ರೈವ್, ಹಳೆ ವಾಹನದ ಮೌಲ್ಯಮಾಪನ ಮತ್ತು ವಿನಿಮಯ ಕೂಡ ನಡೆಯಿತು.
ನೂರಾರು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು. ಈ ಸಂದರ್ಭದಲ್ಲಿ ಅದ್ವೈತ್ ಜೆಸಿಬಿ, ಅದ್ವೈತ ಹುಂಡೈ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.