ಶುಭದಾ ಆರ್.ಪ್ರಕಾಶ್ ಪ್ರಧಾನಿ ಮೋದಿಯವರ ನಿವಾಸದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ

0


ಜ. 26 ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾದ ಶುಭದಾ ಆರ.ಪ್ರಕಾಶ್‌ರವರು ಪ್ರಧಾನಿ ಮೋದಿಯವರ ನಿವಾಸದಲ್ಲಿ ಪ್ರದರ್ಶಿಸಲ್ಪಟ್ಟ ಎನ್‌ಸಿಸಿ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಗುಜರಾತಿ ಡ್ಯಾನ್ಸ್‌ನಲ್ಲಿ ಜ. 24 ರಂದು ಭಾಗವಹಿಸಿದರು.


ಇವರು ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 40 ಮಂದಿ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಶುಭದಾರವರು ಸೂರ್ತಿಲ ನಿವಾಸಿ ರವಿಪ್ರಕಾಶ್ ಸಿ.ಪಿ. ಮತ್ತು ಜಯಶ್ರೀ ದಂಪತಿಗಳ ಪುತ್ರಿ. ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ.