ಫೆ. 11 -15: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ – ಆಮಂತ್ರಣ ಪತ್ರ ಬಿಡುಗಡೆ

0

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಣ್ಣಪ್ಪಾದಿ ದೈವಗಳ ನೇಮೋತ್ಸವ ಫೆ. 11ರಿಂದ ಫೆ. 15ರ ತನಕ ಜರಗಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಜ. 26ರಂದು ನಡೆಯಿತು.


ದೇವಸ್ಥಾನದ ಧರ್ಮದರ್ಶಿ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಪರಮೇಶ್ವರಯ್ಯ ಕಾಂಚೋಡು, ಕಾರ್ಯದರ್ಶಿ ಹರ್ಷ ಜೋಗಿಬೆಟ್ಟು, ಸದಸ್ಯ ವೆಂಕಟಕೃಷ್ಣ ಗೌತಮ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ರೋಹಿತ್ ಚಾಕೊಟೆಡ್ಕ, ಸಂಚಾಲಕರಾದ ರವೀಂದ್ರ ರೈ ಟಪ್ಪಾಲುಕಟ್ಟೆ, ಕಾರ್ಯದರ್ಶಿ ರವಿಶಂಕರ ಕಾಂಚೋಡು, ಉಪಾಧ್ಯಕ್ಷ ಜನಾರ್ಧನ ಕೊಳೆಂಜಿಕೋಡಿ, ಜತೆ ಕಾರ್ಯದರ್ಶಿ ಮೋಹನ್ ಕುರಿಯ ಭವಾನಿಶಂಕರ ಕಾಯರ ಕಾಣಿಯೂರು, ಮಹಾಬಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.