ಅಜ್ಜಾವರ : ಮೇದಿನಡ್ಕದಲ್ಲಿ ಸಂಭ್ರಮದ 76ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

0

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ 76ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ನಿಮಿತ್ತ ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ನಾಚಿ ಮುತ್ತು, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾದ ಪೊನ್ನುದೊರೆ, ಕೆ.ಎಫ್.ಡಿ.ಸಿ ಸಿಬ್ಬಂದಿ ಪ್ರವೀಣ್ ಮೇದಿನಡ್ಕ ,ಹಿರಿಯರಾದ ದಯಾಳ್ ಮೇದಿನಡ್ಕ, ಭಾಸ್ಕರ್, ಸತ್ಯಶೀಲನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯಂ ಸ್ವಾಗತಿಸಿ, ಧನ್ಯ ನಾಂಗುಳಿ ಧನ್ಯವಾದ ಸಮರ್ಪಿಸಿದರು, ರಮೇಶ್ ಮೇದಿನಡ್ಕ ಕಾರ್ಯಕ್ರಮ ಸಂಘಟಿಸಿದರು.
ಸ್ಥಳೀಯರಾದ ದಿನೇಶ್ ನಾಂಗುಳಿ, ಸುನೀಲ್ ನಾಂಗುಳಿ, ರವಿ ಮೇದಿನಡ್ಕ, ಕರುಣಾಕರ ಮೇದಿನಡ್ಕ ಅಲ್ಲದೆ ಮೇದಿನಡ್ಕ ಪರಿಸರದ ಸಾರ್ವಜನಿಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು.