ಅನ್ಸಾರ್ ವತಿಯಿಂದ ಧಾರ್ಮಿಕ ಪ್ರಭಾಷಣ
ಇಂದು ಸಮಾರೋಪ ಸಮಾರಂಭ:ಪೇರೋಡ್ ಉಸ್ತಾದ್ ಆಗಮನ
ಸುಳ್ಯ ಗಾಂಧಿನಗರ ಅನ್ಸಾರುಲ್ ಮುಸ್ಲಿಂಮೀನ್ ಅಸೋಸಿಯೇಷನ್ ಇದರ ವತಿಯಿಂದ ಗಾಂಧಿನಗರ ಮದ್ರಸ ವಠಾರದಲ್ಲಿ ನಡೆಯುತ್ತಿರುವ 3 ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದ ಎರಡನೇ ದಿನವಾದ ಜ 27 ರಂದು ಮುಖ್ಯ ಪ್ರಭಾಷಣದಲ್ಲಿ ಖ್ಯಾತ ವಾಗ್ಮಿ ಅನ್ವರ್ ಅಲಿ ಹುದವಿ ಮಲಪ್ಪುರಂ ರವರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ‘ಇಸ್ಲಾಂ ಧರ್ಮದಲ್ಲಿ ಪವಿತ್ರ ತಿಂಗಳುಗಳ ಸಾಲಿಗೆ ರಜಬ್ ತಿಂಗಳು ಕೂಡ ಒಂದಾಗಿದೆ. ಜಗತ್ತಿಗೆ ಅಲ್ಲಾಹನ ಪ್ರಕಾಶಮಯಗಳು ಬಂದಿಳಿದ ಸಮಯವಾಗಿದೆ ರಜಬ್. ಮೆಹರಾಜ್ ದಿನ ಪಾಪಗಳ ಮುಕ್ತಿಗಾಗಿ,ಮತ್ತು ಅಲ್ಲಾಹನ ಅನುಗ್ರಹಕ್ಕಾಗಿ ಯಾಚಿಸುವ ದಿನವಾಗಿದ್ದು ಯಾರು ಕೂಡ ಇದನ್ನು ವ್ಯರ್ಥ ಮಾಡದೆ ಅಲ್ಲಾಹನ ಆರಾಧನೆಯ ಮೂಲಕ ಒಳಿತಿನೆಡೆಗೆ ಸಾಗಿ ಜೀವನವನ್ನು ಧನ್ಯಗೊಳಿಸ ಬೇಕಾಗಿದೆ ಎಂದು ಸಂದೇಶವನ್ನು ನೀಡಿದರು.
ಅಸ್ಸಯ್ಯದ್ ತ್ವಾಹಿರ್ ಸಅದಿ ಬಾಅಲವಿ ತಂಙಳ್ ದುವಾ ನೆರವೇರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಖತೀಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿಯವರ ನೇತೃತ್ವದಲ್ಲಿ ಮೆಹರಾಜ್ ಅಂಗವಾಗಿ ಮೌಲೂದ್ ಪಾರಾಯಣ ನಡೆಯಿತು.
ಎಂ ಜೆ ಎಂ ಗಾಂಧಿನಗರ ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಸುಳ್ಯ ಅನ್ಸಾರಿಯಾ ಎಜುಕೇಷನ್ ಸೆಂಟರ್ ಇದರ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು.
ವೇದಿಕೆಯಲ್ಲಿ ಅಸ್ಸಯ್ಯಿದ್ ಖಾಸಿಂ ತಂಙಳ್,ಗಾಂಧಿನಗರ ಮಸೀದಿ ಕಮಿಟಿಯ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಿಯ್ಯದ್ದೀನ್ ಫ್ಯಾನ್ಸಿ,ಅನ್ಸಾರುಲ್ ಮುಸ್ಲಿಮೀನ್ ಅಸೋಷಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್,ಸುಳ್ಯ ನ. ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್,ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೋ, ಹಿರಿಯರಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು, ಜಟ್ಟಿಪಳ್ಳ ಮದ್ರಸಾ ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಹಾಗೂ ಸ್ಥಳೀಯ ಎಂ ಐ ಎಂ ಮದ್ರಸಾ ಮುಅಲ್ಲಿಮರು, ಹಾಗೂ ಇತರ ಮುಖಂಡರುಗಳು ಉಪಸ್ಥಿತರಿದ್ದರು.
ಮೂರು ದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮಕ್ಕೆ ಇಂದು ತೆರೆ ಕಾಣಲಿದ್ದು ಇಂದು ಜನವರಿ 28 ರಂದು ನಡೆಯುವ ಧಾರ್ಮಿಕ ಮತ ಪ್ರಭಾಷಣದ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ ದುವಾಶಿರ್ವಚನ ನೀಡಲಿದ್ದು ಮುಖ್ಯ ಪ್ರಭಾಷಣವನ್ನು ಖ್ಯಾತ ಪಂಡಿತ ಶೈಖುನಾ ಪೇರೋಡ್ ಅಬ್ದುರಹ್ಮಾನ್ ಸಖಾಫಿ ಯವರು ಮಾಡಲಿದ್ದಾರೆ.