ದಾಖಲೆ ಪತ್ರಗಳಿಲ್ಲದೆ ಬಡ ಮಹಿಳೆಯ ಸಂಕಷ್ಟ

0

ಆಧಾರ್ ಕಾರ್ಡ್ ಒದಗಿಸಿಕೊಟ್ಟ ಸುಳ್ಯದ ಮಲ್ನಾಡ್ ಚಾರಿಟೇಬಲ್ ಟ್ರಸ್ಟ್

ಬಡರೋಗಿ ಮಹಿಳೆಯೋರ್ವರು ಮಾರಕ ಖಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಬೇಕಾದ ಹಣವಿಲ್ಲದೆ ಸಂಕಷ್ಟದಲ್ಲಿದ್ದು ಸರಕಾರದಿಂದ ಯೋಜನೆ ಪಡೆಯಲು ಕೂಡ ಅವರಲ್ಲಿ ಯಾವುದೇ ದಾಖಲೆ ಪತ್ರವಿಲ್ಲದೆ ಇದ್ದು ಇದೀಗ ಸುಳ್ಯದ ಮಲ್ನಾಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಹಲವು ಪ್ರಯತ್ನಗಳ ಮೂಲಕ ಬಡ ಮಹಿಳೆಗೆ ಆಧಾರ್ ಕಾರ್ಡ್ ಒದಗಿಸಿ ಮಾನವೀಯತೆ ಮೆರೆದಿದೆ.




ಮೂಲತ: ಕಡಬ ಮೂಲದ ಮಹಿಳೆ ರಾಜಲಕ್ಷ್ಮಿ ಇವರು ಶ್ರೀಲಂಕಾದಿಂದ ವಲಸೆ ಬಂದವರಾಗಿದ್ದು ಪ್ರಸ್ತುತ ಕೊಡಿಯಾಲ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇದೀಗ ಮಹಿಳೆ ಮಾರಕ ಖಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಭರಿಸಲು ಬೇಕಾದ ಹಣವಿಲ್ಲದೆ ಸರಕಾರದ ಯೋಜನೆಗೆ ಅರ್ಜಿಗಳನ್ನು ಹಾಕಲು ಬೇಕಾದ ಯಾವುದೇ ದಾಖಲೆ ಪತ್ರಗಳು ಕೂಡ ಇಲ್ಲದೆ ಸಂಕಷ್ಟ ಅನುಭವಿಸುತಿದ್ದರು.




ಕಳೆದ ಹಲವಾರು ವರ್ಷಗಳಿಂದ ಆಧಾರ್ ಕಾರ್ಡ್ ಮಾಡಿಸಲು ಪುತ್ತೂರು, ಕಡಬ, ಸುಳ್ಯ ಮುಂತಾದ ಕಡೆಗಳಲ್ಲಿ ಪ್ರಯತ್ನ ನಡೆಸಿದಾದರೂ ಇವರ ತಂಬ್ ಬೇರೆ ವ್ಯಕ್ತಿಯ ಹೆಸರಲ್ಲಿ ಇರುವ ಕಾರಣ ಸಮಸ್ಯೆ ಎದುರಿಸುತ್ತಿದ್ದರು.




ಕೊನೆಗೆ ಸುಳ್ಯದ ಮಲ್ನಾಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಗೆ ಬಂದಿದ್ದು ಇದಕ್ಕೆ ಕೂಡಲೆ ಸ್ಪಂದಿಸಿದ ಟ್ರಸ್ಟ್ ನ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್ ಮಹಿಳೆಗೆ ಆಧಾರ್ ಮಾಡಿ ಕೊಡಲು ಸತ ಪ್ರಯತ್ನಗಳನ್ನು ಮಾಡಿದರು. ಆದರೂ ಇಲ್ಲಿ ಅದು ಆಗದಿದ್ದಾಗ ಆ ಬಡ ಮಹಿಳೆಯನ್ನು ಬೆಂಗಳೂರು ಆಧಾರ್ ಕೇಂದ್ರದ ಮುಖ್ಯ ಕಚೇರಿಗೆ ಕೊಂಡುಹೋಗಿ ಅಲ್ಲಿಗೂ ಎರಡು ಭಾರಿ ಹೋಗುವಂತೆ ಆಗಿದ್ದರೂ ಪ್ರಯತ್ನವನ್ನು ಬಿಡದೆ ಇದೀಗ ಮಹಿಳೆಗೆ ಆಧಾರ್ ಕಾರ್ಡ್ ಬರುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇವರಿಗೆ ಬಂದ ಆಧಾರ್ ಕಾರ್ಡನ್ನು ಜ. ೨೯ ರಂದು ಸುಳ್ಯ ಗಾಂಧಿನಗರದ ಟ್ರಸ್ಟ್ ನ ಕಚೇರಿಯಲ್ಲಿ ಮಹಿಳೆಗೆ ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರ. ಕಾರ್ಯದರ್ಶಿ ಕೆ ಎಂ ಮುಸ್ತಫಾ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೆ ಎಂ ಮುಸ್ತಫಾ ರವರು ಕೂಡ ಈ ಮಹಿಳೆಯ ಚಿಕಿತ್ಸೆ ಗೆ ಸಹಾಯಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿಯೂ ಭೇಟಿ ಮಾಡಿಸಿ ಮನವಿ ಮಾಡಿಕೊಂಡಿದ್ದಾರೆ.