ಉಪಾಧ್ಯಕ್ಷರಾಗಿ ಪುರುಷೋತ್ತಮ ಕಾಡುಸೊರಂಜ ಅವಿರೋಧ ಆಯ್ಕೆ
ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ ಹಾಗೂ ಉಪಾಧ್ಯಕ್ಷರಾಗಿ ಪುರುಷೋತ್ತಮ ಕಾಡುಸೊರಂಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾದ ಕೇಶವಮೂರ್ತಿ ಹೆಬ್ಬಾರ್, ಆಶಿಕ್ ದೇವರಗುಂಡ, ಉಮೇಶ್ ಮಂಡೆಕೋಲು, ಲಕ್ಷ್ಮಣ ಉಗ್ರಾಣಿಮನೆ, ರಾಜಣ್ಣ ಪೇರಾಲುಮೂಲೆ, ಲಿಂಗಪ್ಪ ಬದಿಕಾನ,ಕುಸುಮ ದೇವರಗುಂಡ, ಜಯಶ್ರೀ ಚೌಟಾಜೆ, ಶಶಿಧರ ಕಲ್ಲಡ್ಕ, ಸದಾನಂದ ಮಡಿವಾಳಮೂಲೆ ಉಪಸ್ಥಿತರಿದ್ದರು.

ಸಹಕಾರ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಎಂ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮೇಲ್ವಿಚಾರಕ ರತನ್ ಕೆ.ಎಸ್. ಇದ್ದರು. ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬಳಿಕ ಸಂಘದ ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ರೈ, ನಿಕಟಪೂರ್ವ ಉಪಾಧ್ಯಕ್ಷೆ ಜಲಜ ದೇವರಗುಂಡ, ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ, ಬಾಲಚಂದ್ರ ದೇವರಗುಂಡ, ಜಯರಾಜ ಕುಕ್ಕೆಟ್ಟಿ, ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಮಠ, ಈಶ್ವರಚಂದ್ರ ಕೆ.ಆರ್., ಭಾರತಿ ಉಗ್ರಾಣಿಮನೆ, ವಿನುತಾ ಪಾತಿಕಲ್ಲು, ಅನಂತಕೃಷ್ಣ ಚಾಕೋಟೆ, ಉದಯಕುಮಾರ್ ಆಚಾರ್, ಸುರೇಶ್ ಚೌಟಾಜೆ, ದಿವ್ಯಲತಾ ಚೌಟಾಜೆ, ರಾಧಿಕ ಮೈತಡ್ಕ, ಕೇಶವ ಜಬಳೆ, ಉಷಾ ಮಾವಂಜಿ, ಸುಂದರ ಗೌಡ ಕಾಡುಸೊರಂಜ ಮೊದಲಾದವರು ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಗೌರವಿಸಿದರು.