ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ 53ನೇ ವರ್ಷದ ಏಕಾಹ ಭಜನೆ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ 53ನೇ ವರ್ಷದ ಏಕಾಹ ಭಜನೆಯು ಫೆ.8ರಂದು ಬೆಳಿಗ್ಗೆ ಮಂದಿರದ ಅರ್ಚಕ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯ ಅವರ ನೇತೃತ್ವದಲ್ಲಿ ದೀಪಪ್ರತಿಷ್ಠೆ ಮೂಲಕ ಆರಂಭಗೊಂಡಿದೆ.

ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಜಗನ್ನಾಥ ಕಾಪಿಲ, ಅಧ್ಯಕ್ಷ ವಸಂತ ಮಳಿ, ಕಾರ್ಯದರ್ಶಿ ಈಶ್ವರ ಕೊರಂಬಡ್ಕ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ಪೂಜೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಫೆ.9ರಂದು ಬೆಳಿಗ್ಗೆ ಮಂಗಳಾಚರಣೆ, ದೀಪಸ್ತಂಭನ, ಪ್ರಸಾದ ವಿತರಣೆ ಜರುಗಲಿದೆ.
ಏಕಾಹ ಭಜನೆ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಸೇವೆ ನಡೆಯುತ್ತಿದೆ.