ಅಧ್ಯಕ್ಷ: ಹೇಮಂತ್ ದೋಲನಮನೆ,ಕಾರ್ಯದರ್ಶಿ :ತೀರ್ಥರಾಮ ದೋಣಿಪಳ್ಳ
ಕೊಲ್ಲಮೊಗ್ರದಲ್ಲಿ ನೂತನ ಭಜನಾ ಮಂಡಳಿ ಉದ್ಘಾಟನೆ ಫೆ.2 ರಂದು ಕೊಲ್ಲಮೊಗ್ರ ಶ್ರೀ ಮಯೂರ ಕಲಾಮಂದಿರದಲ್ಲಿ ಸುಳ್ಯ ತಾಲೂಕಿನ ಭಜನಾ ಪರಿಷತ್ತಿನ ಕಾರ್ಯದರ್ಶಿ ಸತೀಶ್ ಟಿ ಎನ್ ರವರ ಮಾರ್ಗದರ್ಶನದಲ್ಲಿ
ಶ್ರೀ ಅಯ್ಯಪ್ಪ ಭಜನಾ ಮಂಡಳಿ ಎಂಬ ನಾಮಾಂಕಿತದೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಗೊಂಡಿತು.

ಗೌರವ ಸಲಹೆಗಾರರಾಗಿ ಸತೀಶ್ ಟಿ ಎನ್ ,ಗೌರವ ಅಧ್ಯಕ್ಷರಾಗಿ ಮಾಧವ ಚಾಂತಾಳ , ಅಧ್ಯಕ್ಷರಾಗಿ ಹೇಮಂತ್ ದೋಲನ ಮನೆ, ಕಾರ್ಯದರ್ಶಿಯಾಗಿ ತೀರ್ಥರಾಮ ದೋಣಿಪಳ್ಳ ,
ಸದಸ್ಯರುಗಳಾಗಿ ಯೋಗೀಶ್ ಚೂಂತಾರು. ವಿವೇಕ್ ಮಿತ್ತೋಡಿ, ಸುಧಾಮಣಿ ಕುಂಜ್ಞೆಟಿ, ಚಂದ್ರಶೇಖರ ಕೊಂದಾಳ, . ದಿಗಂತ್ ಕೊಂದಾಳ, ಸಚಿನ್ ಪೊನ್ನಚಂದ್ರ ಮನೆ, ಪ್ರಖ್ಯಾತ್ ಪೈಕ ಸದಸ್ಯರುಗಳಾಗಿ ಆಯ್ಕೆಯಾದರು.ಕಾರ್ಯಕ್ರಮದಲ್ಲಿ ಹೇಮಂತ್ ದೋಲನಮನೆ ಯವರು ಸ್ವಾಗತಿಸಿದರು.ತೀರ್ಥರಾಮ ದೋಣಿಪಳ್ಳ ವಂದಿಸಿದರು.


