ಕಂಡಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಮನೆಯವರ ಮನವಿ
ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಸಿ.ಆರ್.ಸಿ.ಯ ಕಲೈಅರಸು ಎಂಬವರು ಕಾಣೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಕಳೆದ ಆಗಸ್ಟ್ ತಿಂಗಳಿನಿಂದ (2024) ಇವರು ಮನೆಯಿಂದ ಕಾಣೆಯಾಗಿದ್ದು ಇದುವರೆಗೆ ಪತ್ತೆಯಾಗಿರುವುದಿಲ್ಲ.
5.6 ಎತ್ತರವಿರುವ ಇವರು ಎಣ್ಣೆಕಪ್ಪು ಬಣ್ಣ ಹೊಂದಿದ್ದು ತಮಿಳು, ಕನ್ನಡ , ಮಲಯಾಳ, ತುಳು ಬಾಷೆ ಮಾತನಾಡುತ್ತಾರೆ. ಟ್ಯಾಪಿಂಗ್ ವೃತ್ತಿ ಮಾಡಿಕೊಂಡಿದ್ದ ಇವರು ಕಾಣೆಯಾಗಿದ್ದು ಈ ಬಗ್ಗೆ ಅವರ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಇಲ್ಲಿಯವರೆಗೆ ಪತ್ತೆಯಾಗದ ಹಿನ್ನಲೆಯಲ್ಲಿ ಎಲ್ಲಿಯಾದರು ಇವರನ್ನು ಕಂಡರೆ ಬೆಳ್ಳಾರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.