ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪೂರ್ವಭಾವಿ ಸಭೆ

0

ಸಮಿತಿಯ ಸಂಚಾಲಕರಿಗೆ ಜವಬ್ದಾರಿ ಹಂಚಿಕೆ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪೂರ್ವ ಭಾವಿ ಸಭೆಯು
ಫೆ.20 ರಂದು ನಡೆಯಿತು.

ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಮಾರ್ಚ್ 15 ರಿಂದ 18 ರ ತನಕ ನಡೆಯಲಿರುವ ಮಹೋತ್ಸವದ ವಿವಿಧ ಸಮಿತಿಯ ಸಂಚಾಲಕರಿಗೆ ಮತ್ತು ಸದಸ್ಯರಿಗೆ ಜವಬ್ದಾರಿ ನಿರ್ವಹಣೆಯ ಕುರಿತು ಮಾರ್ಗದರ್ಶನ ಹಾಗೂ ಮಾಹಿತಿ ನೀಡಲಾಯಿತು. ಆಮಂತ್ರಣ ಮನೆಗೆ ತಲುಪಿಸುವಕುರಿತುಸೂಚಿಸಲಾಯಿತು.


ವೇದಿಕೆಯಲ್ಲಿ ಕುಟುಂಬದ ಯಜಮಾನ ಕುಂಞಕಣ್ಣ ಎ, ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಆರ್.ಕುಂಞಿಕಣ್ಣನ್ ಬೇಡಗಂ,ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ರಧೀಶನ್ ಅರಂಬೂರು, ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ಕೆ.ಎಸ್.ಕೃಷ್ಣಪ್ಪ ಕೆದಂಬಾಡಿ, ಕುಂಞರಾಮನ್ ಶ್ರೀ ಶೈಲಂ, ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಪು, ಗೌರವ ಸಲಹೆಗಾರರಾದ ಶ್ರೀಪತಿ ಭಟ್ ಮಜಿಗುಂಡಿ, ಕೊರಗಪ್ಪ ಮಾಸ್ತರ್ ಕಣಕ್ಕೂರು ಉಪಸ್ಥಿತರಿದ್ದರು.


ಸಭೆಯಲ್ಲಿ ಮಹೋತ್ಸವದ ವಿವಿಧ ಉಪ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.