ಅನಾರೋಗ್ಯ ಪೀಡಿತ ಅನಾಥ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್

0

ಸುಳ್ಯ ನಗರ ಬೀದಿ ಬದಿಯಲ್ಲಿ ಅಲೆಮಾರಿ ಜೀವನ ನಡೆಸುತಿದ್ದ ಅನಾಥ ವೃದ್ಧೆಯೋರ್ವರು ಅನಾರೋಗ್ಯ ಪೀಡಿತರಾಗಿ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ರಸ್ತೆ ಬದಿ ಆಶ್ರಯ ಪಡೆದು ಕೊಂಡು ಸಂಕಷ್ಟದಲ್ಲಿ ಇದ್ದರು. ಅನಾರೋಗ್ಯಕ್ಕೆ ಒಳಗಾಗಿ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದದ್ದನ್ನು ಗಮನಿಸಿದ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ರವರು ವೃದ್ಧೆಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಂಬುಲೆನ್ಸ್ ವಾಹನವನ್ನು ಮಹಿಳೆ ಇರುವ ಸ್ಥಳಕ್ಕೆ ತರಿಸಿ ಖುದ್ದು ಅವರೇ ವೃದ್ದೆಯನ್ನು ಆಂಬುಲೆನ್ಸ್ ವಾಹನಕ್ಕೆ ಹತ್ತಿಸಿ ಅವರನ್ನು ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿ ಮಾನವೀಯತೆ ಮೆರೆದರು. ಕೆ ಎಸ್ ಉಮ್ಮರ್ ರವರ ಮಾದರಿ ಸೇವೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.